Monday, December 23, 2024

ಈ ಹಿಂದೆ ಡ್ರಗ್ಸ್ ಇತ್ತು, ಈ ಸಿನಿಮಾದಲ್ಲಿ ಗನ್ ಇದೆ : ನಟ ದರ್ಶನ್

ಬೆಂಗಳೂರು : ಅಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ ಸಿನಿಮಾ ಇದೇ ತಿಂಗಳ ಕೊನೆಯ ವಾರ ಬಿಡುಗಡೆ ಆಗಲಿದೆ. ಸಿನಿಮಾದ ಟೀಸರ್ ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆ ಆಗಿತ್ತು. ಇದೀಗ ಸಿನಿಮಾದ ಟ್ರೈಲರ್ ಅನ್ನು ನಟ ದರ್ಶನ್, ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಬಿಡುಗಡೆಯನ್ನು ಮಾಡಿದ್ದಾರೆ.

ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನ ಜಿಟಿ ಮಾಲ್​ನಲ್ಲಿ ಆಯೋಜಿಸಲಾಗಿತ್ತು. ಸಿನಿಮಾದ ಟ್ರೈಲರ್ ಅನ್ನು ನಟ ದರ್ಶನ್ ಹಾಗೂ ಸುಮಲತಾ ಅವರು ಒಟ್ಟಿಗೆ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ನಟ ದರ್ಶನ್, ಸೂರಿ ಅವರ ಸಿನಿಮಾಗಳು ಭಿನ್ನವಾಗಿರುತ್ತವೆ. ಅವರದ್ದೇ ಆದ ದಾರಿಯಲ್ಲಿ ಅವರು ಸಿನಿಮಾ ಮಾಡುತ್ತಾರೆ. ಅವರ ಸಿನಿಮಾಗಳಲ್ಲಿ ಸಮಾಜವನ್ನು ಹಾನಿ ಮಾಡುತ್ತಿರುವ ವಿಷಗಳಿರುತ್ತವೆ. ಈ ಹಿಂದೆ ಡ್ರಗ್ಸ್​ ಇತ್ತು. ಈ ಸಿನಿಮಾದಲ್ಲಿ ಗನ್ ಇದೆ. ಯುವಕರು ಹೇಗೆ ಗನ್​ಗಳನ್ನು ಬಳಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದರ ಬಗ್ಗೆ ಸೂರಿಯವರು ಸಿನಿಮಾ ಮಾಡಿದ್ದಾರೆ ಎಂದು ನಟ ದರ್ಶನ್ ತಿಳಿಸಿದರು.

RELATED ARTICLES

Related Articles

TRENDING ARTICLES