Monday, December 23, 2024

4 ವರ್ಷದ ಮಗುವಿನ ಮೇಲೆ ಪೊಲೀಸ್ ಅತ್ಯಾಚಾರ!

ರಾಜಸ್ತಾನ: ದೌಸಾದಲ್ಲಿ 4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ ಪೊಲೀಸ್ ಸಬ್ ಇನ್ಸ್​​ಪೆಕ್ಟರ್​​ನ್ನು ಬಂಧಿಸಲಾಗಿದೆ.

ದೌಸಾ ಜಿಲ್ಲೆಯ ಲಾಲ್​ ಸಾಟ್​ ನಲ್ಲಿ ಭೂಪೇಂದ್ರ ಸಿಂಗ್ ಎಂಬ ಎಸ್​ ಐ, ಶುಕ್ರವಾರ ಮಧ್ಯಾಹ್ನ 4 ವರ್ಷದ ಮಗುವನ್ನು ಪುಸಲಾಯಿಸಿ ತನ್ನ ರೂಂಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಸುದ್ದಿ ತಿಳಿದ ಸ್ಥಳೀಯರು ರಹುವಾಸ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಠಾಣೆಯೊಳಗಿದ್ದ ಭೂಪೇಂದ್ರ ಸಿಂಗ್​ ನ್ನು ಹೊರಗೆಳೆದುಕೊಂಡು ಬಂದು ಥಳಿಸಿದ್ದರು.

ಇದನ್ನೂ ಓದಿ: ತಂತಿ ಬೇಲಿಗೆ ಸಿಲುಕಿದ್ದ ಚಿರತೆ ರಕ್ಷಣೆ!

ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಹಿರಿಯ ಪೊಲೀಸ್ ಅಧಿಕಾರಿಗಳು ಭೂಪೇಂದ್ರ ಸಿಂಗ್​​ನನ್ನ ವಶಕ್ಕೆ ಪಡೆದುಕೊಂಡರು. ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಸಹ ಸ್ಥಳಕ್ಕೆ ಭೇಟಿ ನೀಡಿದ್ದು, ಉದ್ರಿಕ್ತ ಗುಂಪನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು.

ಪೊಲೀಸ್ ಅಧಿಕಾರಿ ದಲಿತ ಜನಾಂಗದ ಮೇಲೆ ಅತ್ಯಾಚಾರ ಎಸಗಿರುವುದರಿಂದ ಜನ ರೊಚ್ಚಿಗೆದ್ದಿದ್ದಾರೆ. ಸಂತ್ರಸ್ತ ಮಗುವಿಗೆ ನ್ಯಾಯ ದೊರಕಿಸಿಕೊಡಬೇಕಾದುದು ನಮ್ಮ ಕರ್ತವ್ಯ. ರಾಜಸ್ತಾನದಲ್ಲಿ ಅಶೋಕ್ ಗೆಹ್ಲೋಟ್​ ಸರ್ಕಾರದಲ್ಲಿ ಅರಾಜಕತೆ ಮನೆ ಮಾಡಿದ್ದು, ಪೊಲೀಸರು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ ಇದರಿಂದ ಸಾರ್ವಜನಿಕರಿಗೆ ರಕ್ಷಣೆ ಇಲ್ಲದಂತಾಗಿದೆ.

RELATED ARTICLES

Related Articles

TRENDING ARTICLES