Thursday, June 27, 2024

‘ಪುಷ್ಪ’ ಶೈಲಿಯಲ್ಲಿ ಮರಗಳ್ಳತನಕ್ಕೆ ಯತ್ನ; ಆರೋಪಿ ಅರೆಸ್ಟ್​​!

ಶಿವಮೊಗ್ಗ: ಪುಷ್ಪ ಸಿನಿಮಾ ಶೈಲಿಯಲ್ಲಿ ಮರಗಳ್ಳತನಕ್ಕೆ ಯತ್ನಿಸಿದ್ದ ಮರಗಳ್ಳ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಹೊಳೆಹೊನ್ನೂರು ರಸ್ತೆಯಲ್ಲಿ ನಡೆದಿದೆ.

ನಗರದ ಲಷ್ಕರ್ ಮೊಹಲ್ಲಾ ಬಡಾವಣೆ ನಿವಾಸಿ ಸೈಯದ್ ಬಂಧಿತ ಆರೋಪಿ, ತಮಿಳುನಾಡಿನಿಂದ ಶಿವಮೊಗ್ಗಕ್ಕೆ ಮರಗಳ ಕಳ್ಳ ಸಾಗಾಣಿಕೆ ಮಾಡುತ್ತಿದ್ದ. ಬೊಲೇರೋ ವಾಹನದಲ್ಲಿ ಮೇಲೆ ಟೊಮ್ಯಾಟೊ ಕೆಳಗೆ ಬೆಲೆಬಾಳುವ ಮರಗಳನ್ನು ಇಟ್ಟುಕೊಂಡು ಸ್ಮಗ್ಲಿಂಗ್ ಮಾಡುತ್ತಿದ್ದ.

ಇದನ್ನೂ ಓದಿ: ನಾಲ್ಕನೇ ಮಹಡಿಯಿಂದ ಬಿದ್ದು ಯುವಕ ಆತ್ಮಹತ್ಯೆ!  

ಸೈಯದ್​ ನನ್ನು ಅರಣ್ಯಾಧಿರಿಗಳು ಸೆರೆಹಿಡಿದಿದ್ದು. ಬಂಧಿತನಿಂದ ಲಕ್ಷಾಂತರ ಮೌಲ್ಯದ ಬೀಟೆ ಹಾಗೂ ಕರಿ ಮರಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ಮರಗಳ ಕಳ್ಳಸಾಗಾಣಿಕೆ ಕೃತ್ಯದಲ್ಲಿ ಕೂಡ ಆರೋಪಿ ಸೈಯದ್​ ಭಾಗಿಯಾಗಿದ್ದ ಎನ್ನಲಾಗಿದೆ.

RELATED ARTICLES

Related Articles

TRENDING ARTICLES