Monday, December 23, 2024

ನಾಲ್ಕನೇ ಮಹಡಿಯಿಂದ ಬಿದ್ದು ಯುವಕ ಆತ್ಮಹತ್ಯೆ!

ಬೆಂಗಳೂರು: ಯುವನೋರ್ವ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆರ್ ಆರ್​ ನಗರದ ಹಲಗೇವಡೆರಹಳ್ಳಿಯಲ್ಲಿ ನಡೆದಿದೆ.

ಶಿವಮೊಗ್ಗ ಮೂಲದ ಮದನ್​ (25) ಆತ್ಮಹತ್ಯೆ ಮಾಡಿಕೊಂಡ ಯುವಕ, ಮಲ್ಲೇಶ್ವರ ಅರಣ್ಯ ಭವನದಲ್ಲಿ ಚಾಲಕನಾಗಿದ್ದ ಮದನ್​, ಆರ್.ಆರ್ ನಗರದಲ್ಲಿ ಬಾಡಿಗೆಗಿದ್ದ ಮನೆಯ ನಾಲ್ಕನೇ ಮಹಡಿಯ ಮೇಲಿಂದ ಜಿಗಿದು ಶನಿವಾರ 9 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: 4 ವರ್ಷದ ಮಗುವಿನ ಮೇಲೆ ಪೊಲೀಸ್ ಅತ್ಯಾಚಾರ!

ಘಟನಾ ಸ್ಥಳಕ್ಕೆ ಆರ್​ ಆರ್ ನಗರ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸ್ನೇಹಿತರೊಂದಿಗಿನ ಜಗಳವೇ ಕಾರಣ ಎಂಬ ಶಂಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES