Monday, June 3, 2024

ಬಾಂಗ್ಲಾ ವಿರುದ್ಧ ಆಸ್ಟ್ರೇಲಿಯಾಗೆ 8 ವಿಕೆಟ್​ಗಳ ಭರ್ಜರಿ ಗೆಲುವು

ಬೆಂಗಳೂರು : ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

ಬಾಂಗ್ಲಾದೇಶದ ನೀಡಿದ್ದ 307 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ 44.4 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ಕೇಕೆ ಹಾಕಿತು. ಈ ಸೋಲಿನೊಂದಿಗೆ ಬಾಂಗ್ಲಾದೇಶ ತಂಡ ವಿಶ್ವಕಪ್ ಅಭಿಯಾನವನ್ನು ಮುಗಿಸಿತು.

ಆಸ್ಟ್ರೇಲಿಯಾ ಪರ ಮಿಚೆಲ್ ಮಾರ್ಷ್ ಅಬ್ಬರಿಸಿ ಬೊಬ್ಬಿರಿದರು. 132 ಎಸೆತಗಳಲ್ಲಿ 9 ಭರ್ಜರಿ ಸಿಕ್ಸರ್ ಹಾಗೂ 17 ಬೌಂಡರಿಗಳ ನೆರವಿನೊಂದಿಗೆ ಅಜೇಯ 177* ರನ್​ ಸಿಡಿಸಿದರು. ಡೇವಿಡ್ ವಾರ್ನರ್ 53, ಸ್ಟೀವನ್ ಸ್ಮಿತ್ ಅಜೇಯ 63* ರನ್​ ಗಳಿಸಿದರು. ಬಾಂಗ್ಲಾ ಪರ ತಸ್ಕಿನ್ ಅಹಮ್ಮದ್ ಹಾಗೂ ಮುಸ್ತಿಫಿಜುರ್ ರೆಹಮಾನ್ ತಲಾ ಒಂದು ವಿಕೆಟ್ ಪಡೆದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 307 ರನ್​ ಗಳಿಸಿತು. ಶಾಂಟೋ 45, ತೌಹಿದ್ ಹ್ರದೊಯ್ 74, ತಂಝೀದ್ ಹಸನ್ 36, ಲಿಟನ್ ದಾಸ್ 36, ಮೊಹಮ್ಮದುಲ್ಲಾ 32 ರನ್​ ಸಿಡಿಸಿದರು. ಆಸಿಸ್​ ಪರ ಸೀಟ್ ಆಬಾಟ್, ಆಡಂ ಝಂಪಾ ತಲಾ 2 ವಿಕೆಟ್, ಮಾರ್ಕಸ್ ಸ್ಟೋನಿಸ್ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES