Sunday, December 22, 2024

KEA ಪರೀಕ್ಷೆ ಅಕ್ರಮ : ಆರ್​ಡಿ ಪಾಟೀಲ್​ಗೆ ರಕ್ಷಣೆ ನೀಡಿದ ಇಬ್ಬರ ಬಂಧನ

ಕಲಬುರಗಿ : ಕೆಇಎ ಪರೀಕ್ಷೆ ಅಕ್ರಮ (KEA Exam Scam) ಪ್ರಕರಣದ ಪ್ರಮುಖ ಆರೋಪಿ ಕಿಂಗ್​ಪಿನ್  ಆರ್.ಡಿ.ಪಾಟೀಲ್​ಗೆ ರಕ್ಷಣೆ ನೀಡಿದ ಇಬ್ಬರ ಬಂಧನ ಮಾಡಿದ್ಧಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ನಡೆಸಿದ ಕಿಂಗ್‌ ಪಿನ್‌ ಆರ್.ಡಿ. ಪಾಟೀಲನ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳದೆ ಫ್ಲ್ಯಾಟ್ ಬಾಡಿಗೆ ನೀಡಿದ ಅಪಾರ್ಟ್‌ಮೆಂಟ್‌ ಮಾಲೀಕ ಶಂಕರಗೌಡ ರಾಮಚಂದ್ರ ಯಾಳವಾರ ಹಾಗೂ ಅಲ್ಲಿನ ಸೂಪರ್ ವೈಸರ್‌ ಮತ್ತು ಸೆಕ್ಯೂರಿಟಿ ನೋಡಿಕೊಳ್ಳುತ್ತಿದ್ದ ಶಹಾಬಾದ್ ಮೂಲದ ದಿಲೀಪ್‌ ಪೆವಾರ ಎಂಬುವವರನ್ನು ಅಫಜಲಪುರ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕೆಇಎ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ್ದ ಆರ್.ಡಿ.ಪಾಟೀಲ ಬಗ್ಗೆ ಮಾಧ್ಯಮಗಳಲ್ಲಿ ಇಷ್ಟೊಂದು ಚರ್ಚೆ ನಡೆಯುತ್ತಿದ್ದರೂ ಮನೆ ನೀಡಿದ ಆರೋಪ ಮತ್ತು ಪೊಲೀಸರಿಗೆ ಮಾಹಿತಿ ನೀಡದೆ ಕಿಂಗ್‌ ಪಿನ್ ತಲೆ ಮರೆಸಿಕೊಳ್ಳಲು ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರನ್ನೂ ಬಂಧಿಸಲಾಗಿದೆ.

 

RELATED ARTICLES

Related Articles

TRENDING ARTICLES