Sunday, January 19, 2025

ಹಾಸನಾಂಬೆ ದರ್ಶನಕ್ಕೆ ಬಂದ ಭಕ್ತರಿಗೆ ವಿದ್ಯುತ್ ಶಾಕ್​!: ಓರ್ವ ಬಾಲಕಿ ಸ್ಥತಿ ಗಂಭೀರ

ಹಾಸನ: ಹಾಸನಾಂಬೆ ದರ್ಶನಕ್ಕೆ ಬಂದ ನೂರಾರು ಮಹಿಳಾ ಭಕ್ತರಿಗೆ ವಿದ್ಯುತ್​ ಸಂಭವಿಸಿದ್ದು ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿರುವ ಘಟನೆ ನಡೆದಿದೆ.

ಹಾಸನದ ಸಂತೆ ಪೇಟೆಯ ಬಳಿ ಹಾಸನಾಂಬೆಯ ಧರ್ಮದರ್ಶನದ ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ ವಿದ್ಯುತ್ ಶಾಕ್​ ಸಂಭವಿಸಿದೆ. ಈ ವೇಳೆ ಕರೆಂಟ್​ ಶಾಕ್​ ನಿಂದ ಕೆಲವರು ಕುಸಿದು ಬಿದ್ದಿದ್ದಾರೆ, ವಿದ್ಯುತ್ ಶಾಕ್ ವಿಚಾರ ದೇವಾಲಯದಲ್ಲೆಲ್ಲಾ ಹರಡುತಿದ್ದಂತೆ ಭಕ್ತಾದಿಗಳು ಒಬ್ಬರಮೇಲೆ ಒಬ್ಬರು ಬಿದ್ದು ಓಡಲು ಯತ್ನಿಸಿ ಅವಾಂತರ ಸೃಷ್ಟಿಯಾಗಿದೆ. ಘಟನೆಯಲ್ಲಿ ಓರ್ವ ಬಾಲಕಿ ಸ್ಥಿತಿ ಗಂಭೀರವಾಗಿದ್ದು  ಆಕ್ಸಿಜನ್​ ನೀಡುವ ಮೂಲಕ ಚಿಕಿತ್ಸೆ ನೀಡಲಾಗುತ್ತುದೆ. ಸ್ಥಳಕ್ಕೆ ಆ್ಯಂಬುಲೆನ್ಸ್​ ದಾವಿಸಿದ್ದು ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆಸಲಾಗುತ್ತಿದೆ.

ಇತ್ತೀಚೆಗೆ ಹಾಸನಾಂಬೆ ಜ್ಯೋತಿ ದರ್ಶನದ ಬಳಿಕ ಭಕ್ತರಿಗೆ ಹಾಸನಾಂಬೆ ದೇವಿ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದ್ದರು. ಈ ಹಿನ್ನೆಲೆ ದೇವಿ ದರ್ಶನಕ್ಕೆ ನಾಡಿನೆಲ್ಲಡೆಯಿಂದ ಸಾವಿರಾರಿ ಭಕ್ತರು ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಇಂದು ಕೂಡ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು ಸರತಿಸಾಲಿನಲ್ಲಿ ನಿಂತಿದ್ದ ವೇಳೆ ವಿದ್ಯುತ್ ಅವಘಡ ಸಂಭವಿಸಿದೆ.

RELATED ARTICLES

Related Articles

TRENDING ARTICLES