Sunday, December 22, 2024

ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಬೇಟೆ: 3 ಕೋಟಿ ಮೌಲ್ಯದ ಚಿನ್ನ ವಶಕ್ಕೆ!

ಬೆಂಗಳೂರು: ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ವಿದೇಶಗಳಿಂದ ಚಿನ್ನಭಾರಣ ಕಳ್ಳಸಾಗಣೆ‌ ಮಾಡುತ್ತಿದ್ದ ಐದು ಜನ ಪ್ರಯಾಣಿಕರನ್ನ ಬಂಧಿಸಿದ್ದಾರೆ. ಬಂಧಿತರಿಂದ 3ಕೋಟಿ 9 ಲಕ್ಷ ಮೌಲ್ಯದ 5ಕೆಜಿ 135 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಎರಡು ದಿನದಲ್ಲಿ ಕುವೈತ್, ದುಬೈ, ಶಾರ್ಜಾದಿಂದ ಬೆಂಗಳೂರಿಗೆ ಈ ಪ್ರಯಾಣಿಕರು ಬಂದಿದ್ದರು.

ಇದನ್ನೂ ಓದಿ: ತೆಲಂಗಾಣ ಸಿಎಂ ಕೆಸಿಆರ್​ ಕೋಟ್ಯಾಂತರ ಮೌಲ್ಯದ ಆಸ್ತಿ ಘೋಷಣೆ!

ಮಾತ್ರೆ, ಒಳ ಉಡುಪು, ಮಹಿಳೆಯರ ಪರ್ಸ್ಗಳಲ್ಲಿ ಕಳ್ಳಸಾಗಾಣೆ ಮಾಡಲು ಯತ್ನಿಸಿದ್ದರು. ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES