ಬೆಳಗಾವಿ: ಲಕ್ಷಾಂತರ ಮೌಲ್ಯದ ಸೀರೆಗಳನ್ನು ಕದ್ದಿದ್ದ ಖತರ್ನಾಕ್ ಕಳ್ಳರ ತಂಡವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದ ಶಿರಡಿಯಲ್ಲಿ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಂದ್ರಪ್ರದೇಶ ಮೂಲದ ಸುನಿತಾ ಈಟಾ(45), ಕನಕದುರ್ಗ ಚಡಾಲ್(36), ರಾಣಿ ಮಟ್ಟಪರ್ತಿ(33), ಮಣಿ ದೇವರಕೊಂಡ(39), ರಜನಿ ಮೇಚಾರಪ್ಪು(30), ಚುಕ್ಕಮ್ಮಾ ಪೊಣ್ಣ(50), ವೆಂಕಟೇಶರಾವ್ ಕನುಮುರಿ(41), ವೆಂಕಟೇಶ್‌ರಾವಲು ಉಸುರುಗಂಟಿ(34) ಬಂಧಿತ ಆರೋಪಿಗಳು.
ಇದನ್ನೂ ಓದಿ: ರಾಜ್ಯಾದ್ಯಂತ ಇನ್ನೂ 2 ದಿನಗಳ ಕಾಲ ಮಳೆ!
ನ.3 ರಂದು ಬೆಳಗಾವಿ ನಗರದ ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸೀರೆ ಅಂಗಡಿಗೆ ಗ್ರಾಹಕರ ಸೋಗಿನಲ್ಲಿದ್ದ ಬಂದ ಸೀರೆ ಕಳ್ಳರ ಗ್ಯಾಂಗ್. ದುಬಾರಿ ಬೆಲೆಯ ಸೀರೆಗಳನ್ನು ಕೊಳ್ಳುವ ರೀತಿ ನಟನೆ ಮಾಡಿ ಸುಮಾರು ನಾಲ್ಕು ಲಕ್ಷ ಮೌಲ್ಯದ ಸೀರೆಗಳನ್ನು ಕಾಂಗರೂ ಚೀಲದಲ್ಲಿಟ್ಟುಕೊಂಡು ಬಳಿಕ ಪರಾರಿಯಾಗಿದ್ದರು. ಈ ದೃಶ್ಯಗಳು ಸೀರೆ ಅಂಗಡಿಯಲ್ಲಿದ್ದ ಸಿಸಿಟಿಯಲ್ಲಿ ಸೆರೆಯಾಗಿತ್ತು.
ಘಟನೆ ಕುರಿತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಸಂಬಂಧ ಪೊಲೀಸರ ಒಂದು ಟೀಮ್ ಕಳ್ಳಿಯರ ಬೆನ್ನು ಬಿದ್ದಿತ್ತು ಖಚಿತ ಮಾಹಿತಿಯ ಮೇರೆಗೆ ಮಹಾರಾಷ್ಟ್ರದ ಶಿರಡಿಯಲ್ಲಿ ಎಂಟು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಎಂಟು ಮೊಬೈಲ್ ಮತ್ತು ಒಂದು ಕಾರು ವಶಕ್ಕೆ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.