Monday, December 23, 2024

ಕ್ಷುಲ್ಲಕ ಕಾರಣಕ್ಕೆ ಹೆಲ್ಮೆಟ್​ ನಿಂದ ಹೊಡೆದು ವ್ಯಕ್ತಿಯ ಭೀಕರ ಕೊಲೆ!

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ವ್ಯಕ್ತಿಯೊಬ್ಬನನ್ನು ಹೆಲ್ಮೆಟ್​ನಿಂದ ಹೊಡೆದು ಕೊಂದು ಪುಂಡರು ಅಟ್ಟಹಾಸ ಮೆರೆದಿರುವ ಘಟನೆ ನಗರದ ಲಿಂಗರಾಜಪುರ ನಡೆದಿದೆ.

ಪ್ರವೀಣ್​ ಕೊಲೆಯಾದ ವ್ಯಕ್ತಿ, ಸುಂದರ್​ ಮತ್ತು ತಂಡದಿಂದ ಕೊಲೆ. ಹಳೆ ವೈಷಮ್ಯದಿಂದ ಕೊಲೆಯಾಗಿದೆ ಎಂದು ಹೇಳಲಾಗುತ್ತಿದೆ. ಹೆಲ್ಮೆಟ್ ನಿಂದ ಹೊಡೆದು ಹತ್ಯೆ ಮಾಡುತ್ತಿರುವ ಭಯಾನಕ ದೃಶ್ಯಗಳು ಸಿಸಿಟಿಯಲ್ಲಿ ಸೆರೆಯಾಗಿದೆ. ಈ ಪ್ರಕರಣವು ಬಾಂಣಸವಾಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ​

ಇದನ್ನೂ ಓದಿ: ಉಸಿರುಗಟ್ಟಿಸಿ ಮಹಿಳೆಯ ಕೊಲೆ: ಆರೋಪಿ ಅಂದರ್​​​​!

ಕಳೆದ ರಾತ್ರಿ ಊರ ಜಾತ್ರೆಯ ಹಿನ್ನೆಲೆ ಡಿಜೆ ಬಾಕ್ಸ್​ ಗಳನ್ನು ಹಾಕಲು ಹೋಗಿದ್ದ ವೇಳೆ ಸುಂದರ್​ ಮತ್ತು ಸ್ನೇಹಿತರ ತಂಡ ಪ್ರವೀಣ್ ಜೊತೆ ಜಗಳಕ್ಕೆ ಇಳಿದಿದೆ, ಈ ವೇಳೆ ಮಾತಿಗೆ ಮಾತು ಬೆಳೆದು ಪ್ರವೀಣ್ ಸುಂದರ್​ ಗೆ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ ಸುಂದರ್​ ಮತ್ತು ಸ್ನೇಹಿತರು ಮಾರಕಾಸ್ತ್ರಗಳಿಂದ ಪ್ರವೀಣ್​ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಹೆಲ್ಮೆಟ್ ನಿಂದ ಭೀಕರವಾಗಿ ಹೊಡೆದು ಸುಂದರ್ ಮತ್ತು ಸ್ನೇಹಿತರು ಪ್ರವೀಣ್​ ನನ್ನು ಕೊಲೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES