ಬೆಂಗಳೂರು : KEA ಅಕ್ರಮದ ಕಿಂಗ್ಪಿನ್ ಆರ್.ಡಿ.ಪಾಟೀಲ್ ಪೊಲೀಸರು ಕೈಗೆ ಸಿಗದೇ ಎಸ್ಕೇಪ್ ಆಗಿದ್ದರ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಆರ್.ಡಿ.ಆಪಾಟೀಲ್ ಬಂಧನಕ್ಕೆ ಮಫ್ತಿಯಲ್ಲಿ ಹೋಗಿದ್ರು. ಪೊಲೀಸರು ಬರ್ತಿದ್ದಂತೆ ಆರ್.ಡಿ.ಪಾಟೀಲ್ ಎಸ್ಕೇಪ್ ಆಗಿದ್ದಾನೆ. ಆತನನ್ನು ಒದ್ದು ಒಳಗೆ ಹಾಕುತ್ತೇವೆ ಎಂದು ಹೇಳಿದ್ದಾರೆ.
ಇನ್ನು 6 ತಿಂಗಳು ಕಾಯಿರಿ ಎಂದು ಹೇಳಿದ್ದಾರೆ. ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ತೇವೆ. ನಾವು ಮೈಮೇಲೆ ಎಣ್ಣೆ ಹಾಕಿ ತಪ್ಪಿಸಿಕೊಳ್ತಿಲ್ಲ. ಅಧಿಕಾರಿಗಳ ತಪ್ಪಿದ್ರೂ ಕ್ರಮ ಜರುಗಿಸ್ತೇವೆ. ಯಾವುದಕ್ಕೂ ನಾವು ಹೆದರಲ್ಲ. ಎಲ್ಲವನ್ನೂ ನಾವು ಹೊರಗೆಳೆಯುತ್ತೇವೆ ಎಂದು ತಿಳಿಸಿದ್ದಾರೆ.
ಸದನದಲ್ಲೇ ತಪ್ಪು ಉತ್ತರ ಕೊಟ್ರಲ್ಲ
ಪಿಎಸ್ಐ ನೇಮಕಾತಿ ಪ್ರಕರಣ ವಿಚಾರ ಕುರಿತು ಮಾತನಾಡಿ, ಪಿಎಸ್ಐ ಪ್ರಕರಣದಲ್ಲಿ ಏನು ಮಾಡಿದ್ರು? ಅಕ್ರಮವೇ ಆಗಿಲ್ಲ ಅಂದ್ರು. ಸದನದಲ್ಲೇ ತಪ್ಪು ಉತ್ತರ ಕೊಟ್ರಲ್ಲ. ಒಬ್ಬ ಆರೋಪಿಯನ್ನ ಒಬ್ಬರು ಬಿಡಿಸಿದ್ರಲ್ಲ. ಯಾರು ಬಿಡಿಸಿದ್ದು? ಅವರು ಯಾರು ಹೇಳಿ ಎಂದು ಪರೋಕ್ಷವಾಗಿ ಮಾಜಿ ಡಿಸಿಎಮ ಡಾ.ಸಿ.ಎನ್ ಅಶ್ವಥ್ ನಾರಾಯಣ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.