Monday, December 23, 2024

ಉಸಿರುಗಟ್ಟಿಸಿ ಮಹಿಳೆಯ ಕೊಲೆ: ಆರೋಪಿ ಅಂದರ್​​​​!

ಬೆಂಗಳೂರು: ಉಸಿರುಗಟ್ಟಿಸಿ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೂಡ್ಲು ಬಳಿಯ ನಂಜಾರೆಡ್ಡಿ ಲೇಔಟ್ ನಲ್ಲಿ ನಡೆದಿದೆ.

ಅನುರಾಧ ಅಲಿಯಾಸ್ ಅಲೀಮಾ ಅಸಹಜ ರೀತಿಯಲ್ಲಿ ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ರಾಜಶೇಖರ ಮಹಿಳೆಯನ್ನು ಕೊಲೆ ಮಾಡಿದ್ದ ಆರೋಪಿ,  ಆರಂಭದಲ್ಲಿ ಈ ಘಟನೆ ಸಂಬಂಧಿಸಿ ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೇ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂಬ ಸಾವಿನ ಸಿಕ್ರೇಟ್ ಬಯಲಾಗಿದೆ.

ಇದನ್ನೂ ಓದಿ: ದೇಶದಲ್ಲಿ ಕಾರ್ಮಿಕ ವರ್ಗ ಸಂಪತ್ತನ್ನು ಉತ್ಪಾದಿಸುತ್ತದೆ. ಉಳಿದವರು ಅನುಭವಿಸುತ್ತಾರೆ: ಸಿಎಂ

ರಾಜಶೇಖರನ ಜೊತೆ ಅನುರಾಧ ಎರಡನೇ ಮದುವೆಯಾಗಿದ್ದಳು. ರಾಜಶೇಖರಗೆ ಬೇರೊಬ್ಬ ಮಹಿಳೆ ಜೊತೆಗೆ ಸಂಬಂಧ ಇದೆ ಅನ್ನೋ ವಿಚಾರಕ್ಕೆ ಗಲಾಟೆ ತೀವ್ರಗೊಂಡು, ಕೈಗಳಿಂದ ಕುತ್ತಿಗೆ ಹಿಸುಕಿ ನಂತರ ವೇಲ್​​ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಅವನೇ ಮಹಿಳೆಯನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ.

ಪೊಲೀಸ್ ಠಾಣೆಗೆ ಅಗಮಿಸಿದ ಆರೋಪಿ ಆತ್ಮಹತ್ಯೆ ಎಂದು ಪೊಲೀಸರನ್ನು ನಂಬಿಸಿದ್ದಾನೆ. ಇದರ ಪ್ರಕಾರ ಪರಪ್ಪನ ಅಗ್ರಹಾರ ಪೊಲೀಸರು ಆತ್ಮಹತ್ಯೆ ಪ್ರಕರಣ ಎಂದು ದಾಖಲು ಮಾಡಿಕೊಂಡಿದ್ದರು. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು ಬಲವಂತವಾಗಿ ಕುತ್ತಿಗೆ ಹಿಸುಕಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿ ರಾಜಶೇಖರನನ್ನ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

RELATED ARTICLES

Related Articles

TRENDING ARTICLES