ಕಲಬುರಗಿ: KEA ನಡೆಸಿದ FDA ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಸಂದರ್ಭದಲ್ಲಿ ನಮ್ಮವರೇ ಇರುತ್ತಾರೆ. ಮೊಬೈಲ್ ಫಾರೆನ್ಸಿಕ್ ರಿಪೋರ್ಟ್ಗಾಗಿ ಕಳಿಸಲಾಗಿದೆ. ಪರೀಕ್ಷೆಯಲ್ಲಿ ಏನೆಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ನಾವು ತೆಗೆದುಕೊಂಡಿದ್ದೇವೆ ಎಂದರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಯಾರೆಂದು ಗೊತ್ತಿಲ್ಲ: ಶಾಸಕ ಬೇಳೂರು ಗೋಪಾಲಕೃಷ್ಣ
ಕೆಲವು ಕಡೆಗಳಲ್ಲಿ ಪರೀಕ್ಷೆ ಅಕ್ರಮ ನಡೆದಿದೆ. ಪ್ರಕರಣದ ಗಂಭೀರತೆ ಮೇಲೆ ಸರ್ಕಾರ ತನಿಖಾ ಸಂಸ್ಥೆಗೆ ಕೇಸ್ ನೀಡುತ್ತೆ. ಪ್ರಾಥಮಿಕ ತನಿಖಾ ವರದಿ ರೆಡಿ ಮಾಡಿ ತನಿಖಾ ಸಂಸ್ಥೆಗೆ ನೀಡಬೇಕಾಗುತ್ತೆ.
ಬಿಜೆಪಿ ಅವರೇ ದಯವಿಟ್ಟು ಆತ್ಮಾವಲೋಕನ ಮಾಡಿಕೊಳ್ಳಿ ಬಿಜೆಪಿ ಸರ್ಕಾರದಲ್ಲಿ ನಿಮ್ಮ ಮಂತ್ರಿಗಳು, ಶಾಸಕರೆ ಆರೋಪಿಗಳಿಗೆ ಸಹಕಾರ ಕೊಟ್ಟಿದ್ದು ಎಲ್ಲರಿಗೂ ಗೊತ್ತಿದೆ. ನಮ್ಮ ಅಧಿಕಾರಿಗಳು ಯಾರಾದ್ರು ಇದರಲ್ಲಿ ಇದ್ದರೆ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.