Friday, September 20, 2024

ಇಂಥ ಕೆಟ್ಟ ಬರ ರಾಜ್ಯದಲ್ಲಿ ಯಾವಾಗಲೂ ಬಂದಿರಲಿಲ್ಲ : ರಾಮಲಿಂಗಾ ರೆಡ್ಡಿ

ರಾಮನಗರ : ಈ ಕೆಟ್ಟ ಬರ ರಾಜ್ಯದಲ್ಲಿ ಯಾವಾಗಲೂ ಬಂದಿರಲಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಅವರು, ರಾಮನಗರ ಜಿಲ್ಲೆಯ ಹಲವು ಕಡೆ ಬರ ಪರಿಸ್ಥಿತಿ ವೀಕ್ಷಣೆ ಮಾಡಿದ್ದೇನೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಬೆಂಬಲಕ್ಕೆ ಬರಬೇಕು ಎಂದು ತಿಳಿಸಿದ್ದಾರೆ.

ಜಾನುವಾರುಗಳ ಮೇವಿಗೂ ಸಮಸ್ಯೆ ಆಗಿದೆ. ನೆನ್ನೆ ಮೊನ್ನೆ ಬಿದ್ದ ಮಳೆಯಿಂದ ಏನು ಪ್ರಯೋಜನ ಇಲ್ಲ. ತೆಂಗೂ ರಾಗಿ ಇತರ ಬೆಳಗಳು ನಾಶ ಆಗಿವೆ. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಬರ ಘೋಷಣೆ ಮಾಡಿದ್ದೇವೆ. ಹಿಂದೆ ಕೇಂದ್ರ ಸರ್ಕಾರದ ಗೈಡ್ ಲೈನ್ ಬಹಳ ಸುಲಭ ಇತ್ತು. ಈಗ ಬಹಳ ಕ್ಲಿಷ್ಟಕರವಾಗಿವೆ. ಇಂತಹ ಸಂದರ್ಭದಲ್ಲಿ 114 ತಾಲೂಕು ಬರ ಘೋಷಣೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಕೆಟ್ಟ ಬರ ಎಂದೂ ಬಂದಿರಲಿಲ್ಲ

ಕೃಷಿ ಹಾಗೂ ಕಂದಾಯ ಮಂತ್ರಿಗಳು ದೆಹಲಿಗೆ ಹೋಗಿದ್ದರು. ಕೇಂದ್ರ ಕೃಷಿ ಮಂತ್ರಿ ಭೇಟಿ ಮಾಡಲು ಪ್ರಯತ್ನ ಪಟ್ಟರು. ಕೃಷಿ ಮಂತ್ರಿಗಳಿಗೆ ಬಿಡುವಿಲ್ಲ, ಕೇಂದ್ರ ತಂಡ ಬಂದು ನೋಡಿದ್ದಾರೆ. ಆದರೆ, ಏನು ಪರಿಹಾರ ಹಣ ಬಿಡುಗಡೆ ಆಗಿಲ್ಲ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES