Sunday, December 22, 2024

ಕೋಟ್ಯಧೀಶನಾದ ಮಾದಪ್ಪ : 28 ದಿನಕ್ಕೆ 2ಕೋಟಿಗೂ ಹೆಚ್ಚು ಹಣ ಸಂಗ್ರಹ

ಚಾಮರಾಜ ನಗರ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ಐತಿಹಾಸಿಕ ಪ್ರಸಿದ್ಧ ಮಲೆ ಮಹೇಶ್ವರ ದೇವಾಲಯ ಇದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಆದಾಯ ತಂದುಕೊಡುವ ಪ್ರಮುಖ ದೇವಸ್ಥಾನಗಳಲ್ಲಿ ಇದು ಸಹ ಒಂದಾಗಿದೆ.

ಪವಿತ್ರ ಯಾತ್ರಾ ಸ್ಥಳವಾದ ಮಲೆ ಮಾದಪ್ಪನ ಬೆಟ್ಟದಲ್ಲಿ ಕೇವಲ 28 ದಿನಕ್ಕೆ ಎರಡು ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ.

ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದಿಂದ ನಿನ್ನೆ ರಾತ್ರಿಯವರವಿಗೂ ನಡೆದ ಹಣ ಎಣಿಕೆ ಕಾರ್ಯದಲ್ಲಿ ಕೇವಲ 28 ದಿನಕ್ಕೆ ಎರಡು ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ.

ಇದನ್ನೂ ಓದಿ : ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಯಾರೆಂದು ಗೊತ್ತಿಲ್ಲ: ಶಾಸಕ ಬೇಳೂರು ಗೋಪಾಲಕೃಷ್ಣ

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಪಕರ ಅನುಪಸ್ಥಿತಿಯಲ್ಲಿ ಎಣಿಕೆಯಾಗದ ಬಂಗಾರದ ಮೌಲ್ಯ ಹುಂಡಿಯಲ್ಲಿ ಸಿಕ್ಕ ಬಂಗಾರದ ವಸ್ತುಗಳನ್ನು ಶೀಲ್ ಮಾಡಿ ಅಧಿಕಾರಿಗಳು ತಮ್ಮ ಕಾರ್ಯವನ್ನು ಮಾಡುತ್ತಿದ್ದಾರೆ.

ದಿನೇ ದಿನೇ ಭಕ್ತ ಸಮೂಹವನ್ನು ಹೆಚ್ಚಿಸಿಕೊಳ್ಳುತ್ತಿರುವ ಮಲೈಮಹದೇಶ್ವರದಲ್ಲಿಇತ್ತೀಚಿಗೆ ಪಾದಯಾತ್ರೆಯ‌ ಮೂಲಕವೂ ಆಗಮಿಸುತ್ತಿರುವ ಭಕ್ತರು.ರಾಜ್ಯಯಷ್ಟೇ ಅಲ್ಲದೇ ಹೊರರಾಜ್ಯಗಳಿಂದಲ್ಲೂ ಭಕ್ತ ಸಾಗರ ಹರಿದು ಬರುತ್ತಿದೆ.

RELATED ARTICLES

Related Articles

TRENDING ARTICLES