Saturday, January 18, 2025

ವಿಸಿ ನಾಲೆಗೆ ಕಾರು ಪಲ್ಟಿ : ಐವರು ನೀರುಪಾಲು

ಮಂಡ್ಯ: ವಿಸಿ ನಾಲೆಗೆ ಕಾರು ಪಲ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಜಲಸಮಾಧಿಯಾದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ (Pandavapura) ತಾಲೂಕಿನ ಬನಘಟ್ಟ ಬಳಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ ಚಂದ್ರಪ್ಪ ಎನ್ನುವವರಿಗೆ ಸೇರಿದ ಕಾರು ಇದಾಗಿದ್ದು, ಪಾಂಡವಪುರದಿಂದ ನಾಗಮಂಗಲಕ್ಕೆ ಹೋಗುವ ವೇಳೆ ರಸ್ತೆ ತಿರುವಿನಲ್ಲಿ ವೇಗವಾಗಿ ಬಂದು ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಈ ಘಟನೆ ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಂದ್ರಪ್ಪ(61), ಕೃಷ್ಣಪ್ಪ (60), ಧನಂಜಯ್ಯ (55), ಬಾಬು, ಜಯಣ್ಣ ಬೀಗರ ಊಟಕ್ಕೆ ಹೋಗುತ್ತಿದವರ ಬಾಳಲ್ಲಿ ವಿಧಿಯಾಟವಾಡಿ ಅವರು ಮಸಣ ಸೇರುವಂತೆ ಆಗಿದೆ.

ಘಟನೆ ವಿವರ

ಐದು ಮಂದಿ ಪುರುಷರು ಪ್ರಯಾಣಿಸುತ್ತಿದ್ದ ಕಾರು ಸಾಯಂಕಾಲ 4.45ರ ಸುಮಾರಿಗೆ ತಡೆಗೋಡೆಗೆ ಡಿಕ್ಕಿ ಹೊಡೆದು ವಿಶ್ವೇಶ್ವರಯ್ಯ ನಾಲೆಯ ನೀರಿನೊಳಗೆ ಬಿದ್ದಿದೆ. ನಾಲೆಯಲ್ಲಿ ಕಾರು ಮುಳುಗುತ್ತಿದ್ದ ದೃಶ್ಯವನ್ನು ಸ್ಥಳೀಯರು ವೀಕ್ಷಿಸಿ ಜೋರಾಗಿ ಕಿರುಚಿ, ರಕ್ಷಿಸಲು ಬರುವಷ್ಟರಲ್ಲಿ ಕಾರು ನೀರಿನಲ್ಲಿ ಮುಳುಗಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ಅಗ್ನಿಶಾಮಕ ದಳ ಹಾಗೂ ನುರಿತ ಈಜುಗಾರರ ಸಹಾಯದಿಂದ ನಾಲೆ ನೀರಿನೊಳಗೆ ಮುಳುಗಿದ್ದವರನ್ನು ಮತ್ತು ಕಾರು ಮೇಲೆತ್ತಲು ಕಾರ್ಯಾಚರಣೆ ನಡೆಸಿದರು. ಕ್ರೇನ್ ಮೂಲಕ 8.15ರ ಸುಮಾರಿಗೆ ಕಾರನ್ನು ಮೇಲಕ್ಕೆ ಎತ್ತಲಾಯಿತು. ಆಗ ಐವರ ಶವಗಳು ಕಾರಿನಲ್ಲಿರುವುದು ಕಂಡುಬಂದಿದೆ.

 

RELATED ARTICLES

Related Articles

TRENDING ARTICLES