Sunday, January 19, 2025

ಹಾಸನಾಂಬೆ ದೇವಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಹಾಸನ: ಹಾಸನಾಂಬೆ ದರ್ಶನೋತ್ಸವ ಸಂಭ್ರಮ ಹಾಸನದಲ್ಲಿ ಕಳೆಗಟ್ಟಿದೆ. ಸಾರ್ವಜನಿಕ ದರ್ಶನದ ಐದನೇ ದಿನವಾದ ಇಂದು ದೇವಿ ದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿ ದೇವಿಯ ದರ್ಶನ ಪಡಿದರು.

ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಹಾಸನಾಂಬೆ ದರ್ಶನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ಹಲವು ಸಚಿವರು ಹಾಗೂ ಶಾಸಕರು ಸಾಥ್ ನೀಡಿದ್ದಾರೆ.

ನ.2ರಂದು ಹಾಸನಾಂಬೆಯ ಗರ್ಭಗುಡಿ ಬಾಗಿಲು ತೆರೆದಿದ್ದು, ನ.3ರಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಂದು ಸಾರ್ವಜನಿಕ ದರ್ಶನದ ಐದನೇ ದಿನವಾಗಿದ್ದು, ಮಂಗಳವಾರ ಶಕ್ತಿ ದೇವತೆಯ ದರ್ಶನ ಪಡೆದು ಸಿಎಂ ಸಿದ್ದರಾಮಯ್ಯ ಮಧ್ಯಾಹ್ನ 3 ಗಂಟೆಗೆ ಹಾಸನದ ಜಿ.ಪಂ. ಸಭಾಂಗಣದಲ್ಲಿ ಕೆಡಿಪಿ ಸಭೆಯಲ್ಲಿ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ.

ಸಿಎಂ ಆಗಮನ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿಪೊಲೀಸ್ ಭದ್ರತೆ ಇದ್ದು, ಹಾಸನಾಂಬೆ ದೇಗುಲದ ಆವರಣದಲ್ಲೂ ಖಾಕಿ ಸರ್ಪಗಾವಲಿದೆ.

RELATED ARTICLES

Related Articles

TRENDING ARTICLES