Friday, July 19, 2024

‘ಕ್ಯಾಸಿನೋ’ಗಾಗಿ ಚಿನ್ನ ಕಳ್ಳತನ : 75 ಲಕ್ಷ ಮೌಲ್ಯದ 133 ಲ್ಯಾಪ್ ಟಾಪ್, ಮೊಬೈಲ್ ವಶ

ಬೆಂಗಳೂರು : ಬಹುತೇಕ ಪ್ರಕರಣಗಳಲ್ಲಿ ಕಳ್ಳತನವಾದ ವಸ್ತುಗಳು ಸಿಗೋದೇ ಇಲ್ಲ. ಆದ್ರೆ, ಒಮ್ಮೆ ಕಳ್ಳರು ತಗಲಾಕಿಕೊಂಡ್ರೆ ಅವರಿಂದ ಹತ್ತಾರು ಪ್ರಕರಣಗಳು ಬೆಳಕಿಗೆ ಬರುತ್ತವೆ. ಇಂದು ಬೆಂಗಳೂರು ಪೊಲೀಸರು ಅಂತಹ ಹಲವು ಕಳ್ಳಕಾಕರನ್ನು ಅರೆಸ್ಟ್ ಮಾಡಿ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಶ್ರೀನಾಥ್ ಬಂಧಿತ ಆರೋಪಿ. ಈ ಆಸಾಮಿ ಪಿಜಿ ಹಾಗೂ ಬ್ಯಾಚಲರ್ಸ್ ರೂಂಗಳಲ್ಲಿ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳನ್ನ ಕಳ್ಳತನ ಮಾಡುತ್ತಿದ್ದ. ಈ ಸಂಬಂಧ ಮೂವರನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 75 ಲಕ್ಷ ಮೌಲ್ಯದ 133 ಲ್ಯಾಪ್ ಟಾಪ್ ಹಾಗೂ ಮೊಬೈಲ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.​​

ಇನ್ನು ಕ್ಯಾಸಿನೋದಲ್ಲಿ ಜೂಜಾಡಲು ಚಿನ್ನದಂಗಡಿಯ ಮಾಲೀಕನೊಬ್ಬ ತನ್ನ ಸ್ನೇಹಿತನ ಮನೆಯ ದೇವರ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದ. ಈತನನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರ್ತ ಪೇಟೆಯಲ್ಲಿ ಸಗಟು ಚಿನ್ನದ ವ್ಯಾಪಾರಿಯಾಗಿದ್ದ ರಾಮ್ ಲಾಲ್ ಎಂಬುವರು ನೀಡಿದ ದೂರಿದ ಮೇರೆಗೆ ಆರೋಪಿ ಮೋಹನ್ ಲಾಲ್ ಎಂಬಾತನನ್ನ ಬಂಧಿಸಿ 84 ಲಕ್ಷ ಮೌಲ್ಯದ 1399 ಗ್ರಾಂ ಚಿನ್ನಾಭರಣ ಹಾಗೂ ಗಟ್ಟಿ ಚಿನ್ನ ವಶಪಡಿಸಿಕೊಂಡಿದ್ದಾರೆ.

ಆನೆ ದಂತ, ಎರಡು ತಲೆ ಹಾವು ವಶ

ಇತ್ತೀಚೆಗೆ ವನ್ಯ ಜೀವಿಗಳದ್ದೇ ಸುದ್ದಿ. ಹುಲಿ ಉಗುರು ಪ್ರಕರಣದಿಂದಾಗಿ ಯಾರ್ಯಾರ ಬಳಿ ವನ್ಯಜೀವಿಗಳ ವಸ್ತುಗಳಿವೆ ಅಂತ ಅರಣ್ಯಾಧಿಕಾರಿಗಳು ಜಾಲಾಡಿ ಬಿಟ್ಟಿದ್ರು. ಅದೇ ರೀತಿ ವೈಯ್ಯಾಲಿಕಾವಲ್ ಪೊಲೀಸರು ವನ್ಯಜೀವಿಗಳ ವಸ್ತುಗಳಾದ ಜಿಂಕೆ ಕೊಂಬು, ಆನೆ ದಂತ ಹಾಗೂ ಅಪರೂಪದ ಎರಡು ತಲೆ ಹಾವನ್ನು ಮಾರಾಟ ಮಾಡುತ್ತಿದ್ದ ಖದೀಮರನ್ನು ಅರೆಸ್ಟ್ ಮಾಡಿದ್ದಾರೆ. ಇವರ ಬಳಿಯಿಂದ 27 ಲಕ್ಷ ಮೌಲ್ಯದ 12 ಜಿಂಕೆ ಕೊಂಬುಗಳು, ಆನೆಯ ದಂತ, ಎರಡು ತಲೆ ಜೀವಂತ ಹಾವುಗಳನ್ನು ವಶಪಡಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES