Wednesday, January 22, 2025

ಅನುಮಾನಾಸ್ಪದ ಬಾಕ್ಸ್ ಪತ್ತೆ : ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು: ಚನ್ನಬಸಪ್ಪ

ಶಿವಮೊಗ್ಗ: ಅನುಮಾನಾಸ್ಪದ ಬಾಕ್ಸ್​​ಗಳು (Box) ಪತ್ತೆಯಾಗಿದ್ದ ಪ್ರಕರಣವನ್ನ ರಾಜ್ಯಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕ ಚನ್ನಬಸಪ್ಪ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಅನುಮಾನಾಸ್ಪದ ಬಾಕ್ಸ್​ನಲ್ಲಿ ಎರಡು ಹೊಸ ಟ್ರಂಕ್ ಪತ್ತೆಯಾಗಿದೆ. ಒಂದೊಂದು ಟ್ರಂಕ್​ನಲ್ಲೂ ಬಿಳಿ ಬಣ್ಣದ ಪೌಡರ್ ಪತ್ತೆಯಾಗಿದೆ. ಇದು ಮುಖಕ್ಕೆ ಹಚ್ಚುವ ಪೌಡರ್ ಅಂತೂ ಅಲ್ಲ. ಇದು ಯಾವ ಪೌಡರ್ ಎಂಬುದರ ಬಗ್ಗೆ ರಿಪೋರ್ಟ್ ಬರಬೇಕು. ಈಗಾಗಲೇ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು

ಇಬ್ಬರು ಶಂಕಿತರ ವಿಚಾರಣೆ

ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ಇಬ್ಬರು ಶಂಕಿತರ ವಿಚಾರಣೆ ನಡೆಸಲಾಗುತ್ತಿದೆ. ಭದ್ರಾವತಿ ಮೂಲದ ನಸ್ರುಲ್ಲಾ ಹಾಗೂ ತಿಪಟೂರಿನ ಜಬ್ಬಿ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹಲವು ದಿನಗಳ ಹಿಂದೆ ತಿಪಟೂರು ಪಟ್ಟಣಕ್ಕೆ ಬಂದಿದ್ದ ಶಂಕಿತ ನಸ್ರುಲ್ಲಾ, ನವೆಂಬರ್​ 3 ರಂದು ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ತೆರಳಿದ್ದ. ಬಳಿಕ ನಸ್ರುಲ್ಲಾ ಹಾಗೂ ಜಬ್ಬಿ ಇಬ್ಬರೂ ಸೇರಿಕೊಂಡು ಬಿಳಿ ಬಣ್ಣದ ವಸ್ತುವನ್ನು ಖರೀದಿಸಿದ್ದರು.

4 ರಿಂದ 5 ಕೋಟಿರೂಪಾಯಿ ವ್ಯವಹಾರ ಇದೆ ಎಂದು ನಿನ್ನೆ ನಸ್ರುಲ್ಲಾನ ಕಾರಿನಲ್ಲೇ ಇಬ್ಬರು ತೆರಳಿದ್ದರಂತೆ. ಸದ್ಯ ತಿಪಟೂರಿನ ನಿಗೂಢ ಸ್ಥಳದಲ್ಲಿ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 

 

RELATED ARTICLES

Related Articles

TRENDING ARTICLES