Monday, December 23, 2024

ಸಿಎಂ ಹೊರಟಿದ್ದ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಷ! ತಪ್ಪಿದ ಅನಾಹುತ

ಹೈದರಾಬಾದ್​ : ಚುನಾವಣೆ ಪ್ರಚಾರಕ್ಕೆ ಹೊರಟ ತೆಲಂಗಾಣದ ಸಿಎಂ ಕೆಸಿಆರ್ ಅವರ​ ಹೆಲಿಕಾಪ್ಟರ್​ ಹಾರಾಟವಾಗಿ ಕೆಲವೇ ಕ್ಷಣಗಳಲ್ಲಿ ತುರ್ತು ಭೂಸ್ಪರ್ಷ ಮಾಡಿರುವ ಘಟನೆ ಇಂದು ನಡೆದಿದೆ.

ಟೆಕ್​ ಆಫ್​ ಹಂತದಲ್ಲಿ ಎದುರಾದ ತಾಂತ್ರಿಕ ದೋಷದಿಂದಾಗಿ ತುರ್ತುಭೂಸ್ಪರ್ಷ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೆಲಂಗಾಣ ಚುನಾವಣಾ ಪ್ರಚಾರಕ್ಕೆ ತೆರಳು ಸಿದ್ದತೆ ಮಾಡಿಕೊಂಡು ತಮ್ಮ ಫಾರ್ಮ್​ ಹೌಸ್​ ನಿಂದ ದೇವರಕಾದ್ರಕ್ಕೆ ಹೊರಟಿದ್ದರು. ಈ ವೇಳೆ ತಾಂತ್ರಿಕ ದೋಷ ಎದುರಾಗಿದೆ, ಟೆಕಾಪ್ ಆದ ಕೆಲವೇ ಕ್ಷಣಗಳಲ್ಲಿ ತುರ್ತು ಭೂ ಸ್ಪರ್ಷವಾಗಿದೆ.

ಘಟನೆಯಲ್ಲಿ ಸಿಎಂ ಕೆ,ಸಿ ಚಂದ್ರಶೇಖರ್​ ರಾವ್​, ಪೈಲಟ್​ ಹಾಗು ಸಹ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES