ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದ್ದು ಈ ಹಿನ್ನೆಲೆ ಖಾಸಗಿ ಬಸ್ ಮಾಲೀಕರು ಮತ್ತೆ ಹಗಲು ದರೋಡೆಗೆ ಇಳಿದಿದ್ದಾರೆ.
ಹಬ್ಬದ ಹಿನ್ನೆಲೆ ಬೆಂಗಳೂರಿನಿಂದ ಊರಿಗೆ ತೆರಳಲು ಟಿಕೆಟ್ ಬುಕ್ ಮಾಡಲು ಹೋದವರಿಗೆ ಶಾಕ್ ಎದುರಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆ ಸಾಲು ಸಾಲು ರಜೆ ಇರುವುದರಿಂದ ಬಸ್ ಟಿಕೆಟ್ನ ದರ ದುಪ್ಪಟ್ಟು ಮಾಡಿದ್ದಾರೆ. ಇಂದಿನ ಬಸ್ ಟಿಕೆಟ್ ದರಕ್ಕೆ ಹೊಲಿಸಿದರೆ ನವೆಂಬರ್ 10ಕ್ಕೆ ದ್ವಿಗುಣಗೊಳಿಸಿದ್ದಾರೆ.
ಇದನ್ನೂ ಓದಿ: ನ.12ರವರೆಗೂ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ!
ಹಬ್ಬಗಳು ಬಂದರೆ ಸಾಕು ಖಾಸಗಿ ಬಸ್ನವರು ಟಿಕೆಟ್ ದರ ದುಪ್ಪಟ್ಟು ಮಾಡ್ತಾರೆ. ಖಾಸಗಿ ಬಸ್ಗಳ ಸುಲಿಗೆಗೆ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳದೆ ಮೌನವಹಿಸಿದೆ. ಖಾಸಗಿ ಬಸ್ಗಳ ಸುಲಿಗೆಗೆ ಕಡಿವಾಣ ಬೀಳಬೇಕು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.