Monday, December 23, 2024

ಕಿಂಗ್ ಕೊಹ್ಲಿ ಖಾತೆಗೆ ಮತ್ತೊಂದು ದಾಖಲೆ : ಕುಮಾರ ಸಂಗಕ್ಕಾರ ದಾಖಲೆ ಉಡೀಸ್

ಬೆಂಗಳೂರು : ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ರನ್ ಮೆಷಿನ್ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡರು.

ವಿರಾಟ್ ಕೊಹ್ಲಿ 67 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ ಅರ್ಧಶತಕ ಪೂರೈಸುವ ಮೂಲಕ ಮತ್ತೊಂದು ಮೈಲುಗಲ್ಲು ನಿರ್ಮಿಸಿದರು. ಕೊಹ್ಲಿ (119) ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ (50+ ರನ್) ಗಳಿಸಿದ ಎರಡನೇ ಆಟಗಾರ ಎಂಬ ಇತಿಹಾಸ ನಿರ್ಮಿಸಿದರು.

ಶ್ರೀಲಂಕಾ ಮಾಜಿ ನಾಯಕ ಕುಮಾರ ಸಂಗಕ್ಕಾರ (118) ದಾಖಲೆಯನ್ನು ಕೊಹ್ಲಿ ಉಡೀಸ್ ಮಾಡಿದರು. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (145) ಅಗ್ರಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ (112) ನಾಲ್ಕನೇ ಸ್ಥಾನ ಹಾಗೂ ದಕ್ಷಿಣ ಆಫ್ರಿಕಾದ ಕಾಲಿಸ್ (103) ಐದನೇ ಸ್ಥಾನದಲ್ಲಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಇತಿಹಾಸ ಸೃಷ್ಟಿಸಿದ ಕಿಂಗ್ ಕೊಹ್ಲಿ : ‘ವಿರಾಟ’ ರೂಪಕ್ಕೆ ಸಚಿನ್ ದಾಖಲೆ ಉಡೀಸ್

ಭಾರತದಲ್ಲಿ 6,000 ರನ್ ಪೂರ್ಣ

ಇನ್ನೂ ವಿರಾಟ್ ಕೊಹ್ಲಿ ಈ ಅರ್ಧಶತಕದೊಂದಿಗೆ ವಿರಾಟ್ ತವರು ನೆಲದಲ್ಲಿ 6,000 ಏಕದಿನ ರನ್ ಪೂರೈಸಿದರು. ಸಚಿನ್ ತೆಂಡೂಲ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ವಿಶ್ವಕಪ್‌ನಲ್ಲಿ ಕೊಹ್ಲಿ ಅದ್ಭುತ ಫಾರ್ಮ್​

ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್-2023 ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಬೊಂಬಾಟ್ ಫಾರ್ಮ್​ನಲ್ಲಿದ್ದಾರೆ. 8 ಪಂದ್ಯಗಳಲ್ಲಿ 543 ರನ್​ಗಳಿಸುವ ಮೂಲಕ ಹೆಚ್ಚು ರನ್​ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾ : 85 ರನ್‌

ಅಫ್ಘಾನಿಸ್ತಾನ : 55* ರನ್‌

ಪಾಕಿಸ್ತಾನ : 16 ರನ್

ಬಾಂಗ್ಲಾದೇಶ : 103* ರನ್‌

ನ್ಯೂಜಿಲೆಂಡ್ : 95 ರನ್

ಇಂಗ್ಲೆಂಡ್ : 00 ರನ್

ಶ್ರೀಲಂಕಾ : 88 ರನ್

ದಕ್ಷಿಣ ಆಫ್ರಿಕಾ : 101* ರನ್

RELATED ARTICLES

Related Articles

TRENDING ARTICLES