Wednesday, December 18, 2024

ಗ್ರಾಹಕರ ಸೋಗಿನಲ್ಲಿ ಬಂದ ಖದೀಮರು: ಲಕ್ಷಾಂತರ ಮೌಲ್ಯದ ಸೀರೆ ಕಳವು!

ಬೆಳಗಾವಿ: ಖಡೇ ಬಜಾರ್ ವಿರೂಪಾಕ್ಷ ಬಟ್ಟೆ ಅಂಗಡಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದ ಖದೀಮರು ಲಕ್ಷಾಂತರ ರೂ. ಮೌಲ್ಯದ ಸೀರೆಕಳ್ಳತನ ಮಾಡಿ ಎಸ್ಕೇಪ್ ಆಗಿರುವ ಘಟನೆ ನೀಡಿದಿದೆ.

2 ಲಕ್ಷ ಮೌಲದ್ಯ 8 ಕಾಂಚೀಪುರಂ ಸೀರೆ, 1 ಇಳಕಲ್ ಹಾಗೂ ರೇಷ್ಮೆ ಸೀರೆಗಳನ್ನು ಕಳ್ಳರು ಕದ್ದು ಎಸ್ಕೇಪ್​ ಆಗಿದ್ದಾರೆ. ಈ ಗ್ಯಾಂಗ್​​ನಲ್ಲಿ 6 ಜನ ಮಹಿಳೆಯರು ಹಾಗೂ ಓರ್ವ ಪುರುಷ ಇದ್ದಾನೆ. ಸೀರೆ ಕಳ್ಳತನ ಮಾಡೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಇಂದು ಭಾರತ-ದಕ್ಷಿಣ ಆಫ್ರಿಕಾ ಮುಖಮುಖಿ!

ಒಬ್ಬರಿಗೆ ಒಬ್ಬರು ಪರಿಚಯ ಇಲ್ಲದೇ ಇರುವ ರೀತಿಯಲ್ಲಿ ಅಂಗಡಿಗೆ ಎಂಟ್ರಿ ಕೊಟ್ಟ ಕಿಲಾಡಿಗಳು ಲಕ್ಷಾಂತರ ರೂ. ಮೌಲ್ಯದ ಸೀರೆ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಈ ಮಹಿಳೆಯರು ತೆಲುಗು ಹಾಗೂ ತಮಿಳಿನಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ.

ಸದ್ಯ ಈ ಪ್ರಕರಣವು ಖಡೇ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

RELATED ARTICLES

Related Articles

TRENDING ARTICLES