ಬೆಂಗಳೂರು: ಬೆಂಗಳೂರಿಗರೇ ಫ್ರೆಶ್ ತರಕಾರಿ ಅಂತ ಖರೀದಿಸೋ ಮುನ್ನ ಎಚ್ಚರವಾಗಿರಿ. ಹೆಚ್ಚಿನ ತರಕಾರಿಗಳಲ್ಲಿ ಮಿತಿಯನ್ನು ಮೀರಿ ಭಾರ ಲೋಹಗಳು ಪತ್ತೆಯಾಗ್ತಿವೆ ಆತಂಕಕಾರಿಯಾದ ಸತ್ಯ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ವರದಿಯಲ್ಲಿ ಪತ್ತೆಯಾಗಿದೆ.
ಬೆಂಗಳೂರು ಆಸುಪಾಸಿನಲ್ಲಿ ಬೆಳೆಯೋ ಹಣ್ಣು ತರಕಾರಿ ಬಗ್ಗೆ ಎಷ್ಟು ಸೇಫ್ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ಸಿಲಿಕಾನ್ ಸಿಟಿ ಮಾರುಕಟ್ಟೆಗಳಲ್ಲಿ ಲೋಹ ಮಿಶ್ರಿತ ತರಕಾರಿಗಳ ಹಾವಳಿ ಶುರುವಾಗಿದೆ. ಇತ್ತೀಚಿಗೆ ಕೊಳಕು ನೀರಿನಲ್ಲಿ ತರಕಾರಿಯನ್ನು ಬೆಳೆಯುತ್ತಿರುವವರ ಸಂಖ್ಯೆ ಹೆಚ್ಚಾಗ್ತಾಯಿದೆ. ತರಕಾರಿಗಳಲ್ಲಿ ಲೋಹದ ಅಂಶ ಜಾಸ್ತಿಯಾಗಿರೋದು ಬೆಳಕಿಗೆ ಬಂದಿದೆ. ಹತ್ತು ತರಕಾರಿಗಳ 400ಕ್ಕೂ ಹೆಚ್ಚು ಮಾದರಿಗಳನ್ನು ಟೆಸ್ಟ್ ಮಾಡಿದಾಗ ಕಲುಷಿತ ನೀರಿನಿಂದ ತರಕಾರಿಗಳನ್ನು ಬೆಳೆಯುತ್ತಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ನವೆಂಬರ್ 5ರಿಂದ 3 ದಿನ ಮಳೆ!
ಬೆಂಗಳೂರಿನ ಹೊರ ವಲಯ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕಲುಷಿತ ನೀರಿನಲ್ಲಿ ತರಕಾರಿ ಬೆಳೆಯುತ್ತಿರುವುದು ಹೊಸ ವಿಷಯವೇನಲ್ಲ. ಆದ್ರೆ ಬೆಂಗಳೂರು ಕೇವಲ ಉದ್ಯಾನ ನಗರಿ ಮಾತ್ರವಲ್ಲ, ರಾಜ್ಯದ 5ನೇ ಮಾಲಿನ್ಯ ನಗರಕ್ಕೂ ಫೇಮಸ್ ಆಗಿದೆ. ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಬೆಂಗಳೂರಿಗೆ ಅತಿ ಹೆಚ್ಚು ತರಕಾರಿಗಳು ಸರಬರಾಜು ಆಗ್ತಾವೆ. ಹಾಪ್ ಕಾಮ್ಸ್ ಪ್ರತಿದಿನ ಸುಮಾರು 70 ಟನ್ ತರಕಾರಿಯನ್ನು ಮಾರಾಟ ಮಾಡಿದರೆ, ಇದಕ್ಕಿಂತಲೂ ಹೆಚ್ಚಿನ ತರಕಾರಿಯನ್ನು ಅಂಗಡಿಗಳು ಮತ್ತು ಸೂಪರ್ ಮಾರ್ಕೆಟ್ ಗಳು ಸೇಲ್ ಮಾಡುತ್ತವೆ.
ಸದ್ಯ (EMPRI) ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ವರದಿಯಲ್ಲಿ ಬೆಚ್ಚಿ ಬೀಳಿಸೋ ಸತ್ಯ ಪತ್ತೆಯಾಗಿದೆ. ಆಹಾರ ಇಲಾಖೆ ಸಂಗ್ರಹಿಸಿರೋ ಸ್ಯಾಂಪಲ್ ಗಳಲ್ಲಿ ಶೇಕಡಾ 30% ಲೋಹ ಮಿಶ್ರಿತ ತರಕಾರಿಗಳು ಪತ್ತೆಯಾಗಿದೆ.