Wednesday, January 22, 2025

ಈಶ್ವರಪ್ಪ ಸವಕಲು ನಾಣ್ಯ, ಈ ಕಾರಣಕ್ಕೆ ಟಿಕೆಟ್ ಕೊಟ್ಟಿಲ್ಲ : ಸಿದ್ದರಾಮಯ್ಯ

ಮೈಸೂರು : ಕಾಂತರಾಜ್ ವರದಿಯೇ ನನ್ನ ಕೈಸೇರಿಲ್ಲ. ಆಗಲೇ ವರದಿಗೆ ವಿರೋಧ ಎಂದರೆ ನಾನು ಏನು ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಮೈಸೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂತರಾಜ್​ ವರದಿಯಲ್ಲಿ ಏನಿದೆ ಎಂಬುದೇ ನನಗೆ ಗೊತ್ತಿಲ್ಲ. ಅಂಕಿ ಅಂಶವೇ ಗೊತ್ತಿಲ್ಲದೆ ಅದರ ಬಗ್ಗೆ ಮಾತನಾಡೋದು ಹೇಗೆ‌? ನವೆಂಬರ್​​​ ಒಳಗೆ ಜಾತಿಗಣತಿ ವರದಿ ಕೊಡಬಹುದೆನೋ ಎಂದು ಹೇಳಿದ್ದಾರೆ.

ಕಾಂತರಾಜ್​ ವರದಿಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಈಶ್ವರಪ್ಪ ಒಂದು ಸವಕಲು ನಾಣ್ಯ, ಸವಕಲು ಅನ್ನೋ ಕಾರಣಕ್ಕೆ ಬಿಜೆಪಿಯವರು ಈಶ್ವರಪ್ಪಗೆ ಟಿಕೆಟ್ ಕೊಟ್ಟಿಲ್ಲ. ಈಶ್ವರಪ್ಪ ಮಾತುಗಳಿಗೆ ಬೆಲೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಕೆಂಪಣ್ಣರನ್ನ ಅರೆಸ್ಟ್ ಮಾಡಿದ್ರೆ ಡಿಕೆಶಿಗೆ ಹಣ ತಲುಪಿದೆಯೋ? ಇಲ್ಲವೋ? ತಿಳಿಯಲಿದೆ : ಕೆ.ಎಸ್ ಈಶ್ವರಪ್ಪ

ಪ್ರತಿಮಾ ಕೊಲೆ ಬಗ್ಗೆ ಸಿಎಂ ಪ್ರತಿಕ್ರಿಯೆ

ಗಣಿ ಅಧಿಕಾರಿ ಪ್ರತಿಮಾ ಕೊಲೆ ವಿಚಾರ ಕುರಿತು ಮಾತನಾಡಿ, ಈಗ ತಾನೇ ಇದರ ಬಗ್ಗೆ ಮಾಹಿತಿ ಪಡೆದಿದ್ದೇನೆ. ಅಧಿಕಾರಿ ಒಬ್ಬಂಟಿಯಾಗಿ ಮನೆಯಲ್ಲಿ ವಾಸ ಮಾಡುತ್ತಿದ್ದರು. ಅವರ ಪತಿ ಊರಿನಲ್ಲಿ ಇದ್ದರು. ಸದ್ಯಕ್ಕೆ ಇದು ಆರಂಭಿಕ ಮಾಹಿತಿ. ಕೊಲೆಯ ಬಗ್ಗೆ ಸಂಪೂರ್ಣವಾದ ತನಿಕೆ ನಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

RELATED ARTICLES

Related Articles

TRENDING ARTICLES