Wednesday, January 22, 2025

ಮನೆಯ ಕಾಂಪೌಂಡ್​ ಒಳ ನುಗ್ಗಿದ ಚಿರತೆ: ಬಾಲಕನ ಚೀರಾಟಾಕ್ಕೆ ಚಿರತೆ ಪರಾರಿ!

ಬೆಂಗಳೂರು: ನಗರ ನಿವಾಸಿಗಳಿಗೆ ಮತ್ತೆ ಚಿರತೆ ಆತಂಕ ಶುರುವಾಗಿದೆ. ನೈಸ್ ರಸ್ತೆ ಸಮೀಪದ ಚಿಕ್ಕತೋಗೂರು ಬಳಿ ಚಿರತೆ ಪ್ರತ್ಯಕ್ಷವಾಗಿದೆ.

ಶನಿವಾರ ಸಂಜೆ 7.40ರ ಸಮಯದಲ್ಲಿ ಚಿಕ್ಕತೋಗೂರು ಬಳಿ ಇರುವ ಮನೆ ಕಂಪೌಂಡ್​​ ಒಳಗೆ ಚಿರತೆ ನುಗ್ಗಿದೆ. ಬಾಗಿಲು ಬಳಿ ಬಂದ ಚಿರತೆ ಕಂಡು ಬಾಲಕ ಕಿರುಚಾಡಿದ್ದಾನೆ. ಬಾಲಕನ ಕಿರುಚಾಟಕ್ಕೆ ಚಿರತೆ ಓಡಿ ಹೋಗಿದೆ. ಕೆ.ಆರ್.ಪುರಂ ಅರಣ್ಯ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಯಾರಾದ್ರೂ ನನ್ನ ಪರ ಮಾತಾಡಿದ್ರೆ ನೋಟಿಸ್ ಕೊಡ್ತೀನಿ:ಡಿಕೆಶಿ

ಘಟನೆ ಸಂಬಂಧ ಸ್ಥಳಪರಿಶೀಲನೆ ನಡೆಸಿದ ಅರಣ್ಯ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಈ ವೇಳೆ ಶನಿವಾರ ಸಂಜೆ ಸುರಿದ ಮಳೆಯಿಂದಾಗಿ ಹೆಜ್ಜೆ ಗುರುತು ಪತ್ತೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

RELATED ARTICLES

Related Articles

TRENDING ARTICLES