Monday, December 23, 2024

ವಿರಾಟ್ ಅರ್ಧಶತಕ : ಸಚಿನ್ ಬಳಿಕ ಈ ಸಾಧನೆ ಮಾಡಿದ 2ನೇ ಭಾರತೀಯ ಕಿಂಗ್ ಕೊಹ್ಲಿ

ಬೆಂಗಳೂರು : ರನ್ ಮೆಷಿನ್ ವಿರಾಟ್ ಕೊಹ್ಲಿ ವಿಶ್ವಕಪ್​-2023 ಟೂರ್ನಿಯಲ್ಲಿ ಬೊಂಬಾಟ್​ ಫಾರ್ಮ್​ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ.

67 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನೊಂದಿಗೆ ಬರ್ತ್​ ಡೇ ಬಾಯ್ ಅರ್ಧಶತಕ ಪೂರ್ಣಗೊಳಿಸಿದರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸುವ ಮೂಲಕ ಹೊಸದೊಂದು ದಾಖಲೆ ಬರೆಯಲಿ ಎಂದು ಕೋಟ್ಯಂತರ ಅಭಿಮಾನಿಗಳ ಆಶಯ.

ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಸಾಧನೆ ಮಾಡಿದರು. ವಿಶ್ವಕಪ್​ನಲ್ಲಿ 1,500 ರನ್​ ಪೂರ್ಣಗೊಳಿಸಿದ್ದಾರೆ. ಈ ಹಿಂದೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಇದೇ ಸಾಧನೆ ಮಾಡಿದ್ದರು. ಇದೀಗೆ ವಿರಾಟ್ ಕೊಹ್ಲಿ ಈ ಗೌರವಕ್ಕೆ ಪಾತ್ರರಾದ ಎರಡನೇ ಭಾರತೀಯ ಬ್ಯಾಟರ್​ ಎನಿಸಿಕೊಂಡಿದ್ದಾರೆ.

ಇದೀಗ ವಿರಾಟ್ ಕೊಹ್ಲಿ 71ನೇ ಅರ್ಧಶತಕ ಸಿಡಿಸಿದ್ದಾರೆ. ಹುಟ್ಟುಹಬ್ಬದ ದಿನ G.O.A.T ಶತಕ ಸಿಡಿಸಲಿ ಎಂದು ಅಭಿಮಾನಿಗಳು ಟ್ವೀಟ್​ ಮೂಲಕ ಹಾರೈಸುತ್ತಿದ್ದಾರೆ.

RELATED ARTICLES

Related Articles

TRENDING ARTICLES