Wednesday, January 22, 2025

ವರದಕ್ಷಿಣೆ ಕಿರುಕುಳ ಆರೋಪ: ಕುಟುಂಬಗಳ ನಡುವೆ ಮಾರಮಾರಿ!

ಬೆಂಗಳೂರು: ರಾಜೀ-ಸಂಧಾನ ವೇಳೆ ಮನೆಯೊಂದು ರಣರಂಗವಾದ ಘಟನೆ ಬೆಂಗಳೂರಿನ ಆರ್.ಟಿ.ನಗರದ ಆತ್ಮಾನಂದ ಕಾಲೋನಿಯ ನಿವಾಸದಲ್ಲಿ ನಡೆದಿದೆ.

ಪತಿ ಹಾಗೂ ಪತ್ನಿ ಕುಟುಂಬದ ಮಧ್ಯೆ ಹೊಡೆದಾಟ ನಡೆದಿದೆ. 2 ವರ್ಷದ ಹಿಂದೆ ಮದುವೆಯಾಗಿದ್ದು, ಪತಿ-ಪತ್ನಿ ಮಧ್ಯೆ ಮನಸ್ತಾಪವಿತ್ತು. ಪ್ರತಿನಿತ್ಯ ಕುಡಿದು ಬಂದು ಪತ್ನಿ ಮೇಲೆ ಹಲ್ಲೆ ಹಾಗೂ ವರದಕ್ಷಿಣೆ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಎರಡು ಕುಟುಂಬದ ನಡುವೆ ಸಂಧಾನ ಸಭೆ ಏರ್ಪಡಿಸಲಾಗಿತ್ತು.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಶಾಕ್​ ಕೊಟ್ಟ ಸರ್ಕಾರ!

ಶನಿವಾರ ರಾತ್ರಿ ರಾಜಿಸಂಧಾನದ ಮಾತುಕತೆ ವೇಳೆ ಪತ್ನಿ ಕಡೆಯವರಿಗೆ ಥಳಿಸಲಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಸಂಬಂಧ ಆರ್.ಟಿ.ನಗರ ಪೊಲೀಸ್​​ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.

RELATED ARTICLES

Related Articles

TRENDING ARTICLES