ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ TCM ಅಂಡ್ DCM ಇದ್ದಾರೆ ಎಂದು ಹೇಳುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಹೌದು,ಕಾಂಗ್ರೆಸ್ನಲ್ಲಿ ಸಿಎಂ ಪಟ್ಟಕ್ಕಾಗಿ ಜಗಳ ನಡೆಯುತ್ತಿರುವ ಸಂದರ್ಭದಲ್ಲೇ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ (HD Kumaraswamy) ಅವರು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಓಪನ್ ಆಫರ್ ನೀಡಿದ್ದಾರೆ.
ಇದನ್ನೂ ಓದಿ: CM ಸಿದ್ದು TCM, ಡಿಕೆಶಿ DCM! HDK ಇಟ್ಟ ಈ ಹೆಸರಿನ ಅರ್ಥ ಏನು ಗೊತ್ತಾ?
ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಪದವಿಯ ಬಗ್ಗೆ ಕಾಂಗ್ರೆಸ್‌ನ (Congress) ವಿವಿಧ ಬಣಗಳ ನಾಯಕರ ಪರ-ವಿರೋಧ ಹೇಳಿಕೆಗಳ ನಡುವೆಯೇ ಸಿಎಂ ಸಿದ್ದರಾಮಯ್ಯ (CM Siddaramaiah) ತಮ್ಮ ಸಂಪುಟ ಸದಸ್ಯರಿಗೆ ಉಪಹಾರ ಕೂಟ ಆಯೋಜಿಸಿದ್ದರು. ಸಭೆಯಲ್ಲಿ ಭಾಗಿಯಾಗಿದ್ದ ಸಿಎಂ-ಡಿಸಿಎಂ ಒಗ್ಗಟ್ಟಿನ ಸಂದೇಶವೊಂದನ್ನು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿರುವ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಒಂದು ಹೆಸರನ್ನು ನೀಡಬಹುದು. ಈ ಸರ್ಕಾರದಲ್ಲಿ ಎಷ್ಟು ಜನ ಸಿಎಂ ಆಗ್ತಾರೋ ಗೊತ್ತಿಲ್ಲಾ, ಕಾಂಗ್ರೆಸ್ ಸರ್ಕಾರದಲ್ಲಿ TCM ಅಂಡ್ DCM ಇದ್ದಾರೆ ಎಂದರು.
TCM ಅಂದರೆ Tempravory Chief Minister, DCM ಅಂದರೆ Duplicate Chief Minister ಎಂದು ಹೇಳು ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಸಿಎಂ ಹುದ್ದೆ ಬಗ್ಗೆ ಇನ್ಮುಂದೆ ನಾನು ಉತ್ತರ ಕೊಡಲ್ಲ : ಸಚಿವ ಡಾ.ಜಿ.ಪರಮೇಶ್ವರ್
ಈ ವೇಳೆ ಡಿಕೆ ಶಿವಕುಮಾರ್ ನಾಳೆ ಬೆಳಗ್ಗೆ ಸಿಎಂ ಆದರೆ ನಮ್ಮ 19 ಜೆಡಿಎಸ್ ಶಾಸಕರ ಬೆಂಬಲವನ್ನ ನಾವು ನೀಡುತ್ತೇನೆ ಎಂದು ವೇದಿಕೆ ಮೇಲೆ ಓಪನ್ ಆಫರ್ ಕೊಟ್ಟಿದ್ದಾರೆ.