Monday, December 23, 2024

ಗಾಂಜಾ ರಿಕವರಿಗೆ ತೆರಳಿದ್ದ ಕರ್ನಾಟಕ ಪೊಲೀಸರೇ ಅರೆಸ್ಟ್​!

ಒರಿಸ್ಸಾ: ಗಾಂಜಾ ರಿಕವರಿಗೆ ಹೋಗಿದ್ದ ಕರ್ನಾಟಕ ಪೊಲೀಸರನ್ನೇ ಅರೆಸ್ಟ್ ಮಾಡಿ ಜೈಲಿಗಟ್ಟಿರುವ ಘಟನೆ ಒರಿಸ್ಸಾದಲ್ಲಿ ನಡೆದಿದೆ.

ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಜಿಗಣಿ ಪೊಲೀಸರು ಗಾಂಜಾ ರಿಕವರಿಗೆಂದು ಒರಿಸ್ಸಾಗೆ ತೆರಳಿದ್ದರು. ಈ ವೇಳೆ ಗಾಂಜಾ ಹಿಡಿದು ಬರುತ್ತಿದ್ದ ಕರ್ನಾಟಕ ಪೊಲೀಸರನ್ನು ಒರಿಸ್ಸಾ ಪೊಲೀಸರು ಬಂಧನ ಮಾಡಿದ್ದಾರೆ. ನಾವು ಪೊಲೀಸರು ಎಂದು‌ ಹೇಳಿದರು ಕೇಳದೆ ಬಂಧಿಸಿದ್ದಾರೆ.

ಇದನ್ನೂ ಓದಿ: ಜಾತಿ ನಿಂದನೆ: ಪುನೀತ್​ ಕೆರೆಹಳ್ಳಿ ಪೊಲೀಸ್​ ವಶಕ್ಕೆ!

ಗಾಂಜಾ ರಿಕವರಿಯ ಬಗ್ಗೆ ಈ ಮೊದಲೇ ಪ್ಲಾನ್​ ಮಾಡಿಕೊಂಡು 4 ಜನ ಪೊಲೀಸ್​​ ತಂಡ ಒರಿಸ್ಸಾಗೆ ತೆರಳಿದ್ದರು. ಈ ವೇಳೆ ಅರಣ್ಯ ಪ್ರದೇಶದ ಒಳಗೆ ಮೊದಲು ತೆರಳಿದ್ದ ಪೊಲೀಸ್​ ಪೇದೆ ಆನಂದ್​ನನ್ನು ಓರಿಸ್ಸಾ ಪೊಲೀಸರು​​ ಬಂಧಿಸಿದ್ದಾರೆ.

ಕಾನ್ಸ್‌ಟೇಬಲ್ ಅರೆಸ್ಟ್‌ ಆಗುತ್ತಿದ್ದಂತೆ ಕರ್ನಾಟಕದ ಇನ್ಸ್​​ಪೆಕ್ಟರ್,  ​​​ಆನಂದ್ ನನ್ನು ಬಂಧನದಿಂದ ಬಿಡಿಸಿಕೊಂಡು ಬರಲು ಒರಿಸ್ಸಾಗೆ ತೆರಳಿ ಕಾನೂನು ಪ್ರಕ್ರಿಯೆ ‌ಮುಂದುವರೆಸಿದ್ದಾರೆ.

RELATED ARTICLES

Related Articles

TRENDING ARTICLES