Thursday, January 23, 2025

ಜಮೀನು ವಿಚಾರಕ್ಕೆ ಬಂದೂಕಿನಿಂದ ಶೂಟ್‌ ಮಾಡಿದ ದುಷ್ಕರ್ಮಿಗಳು, ತಂದೆ ಮಡಿಲಲ್ಲೇ ಪ್ರಾಣಬಿಟ್ಟ ಮಗ

ಮಂಡ್ಯ : ಆತ ದೇಶ ಸೇವೆ ಮಾಡಬೇಕು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಬೇಕು ಎಂದು ಪಣತೊಟ್ಟಿದ್ದ. ಆದರೆ, ವಿಧಿಯಾಟ ಬಲ್ಲವರಾರು? ಜಮೀನು ವಿವಾದಕ್ಕೆ ದುಷ್ಕರ್ಮಿಗಳು ಬಂದೂಕಿನಿಂದ ಶೂಟ್ ಮಾಡಿದ್ದು ಆ ಯುವಕ ಮಸಣ ಸೇರಿದ್ದಾನೆ.

ಹೌದು, ಜಮೀನು ವಿಚಾರಕ್ಕಾಗಿ ತಂದೆಯ ಕಣ್ಣೆದುರೇ ಮಗನನ್ನು ಬಂದೂಕಿನಿಂದ ಶೂಟ್‌ ಮಾಡಿ ಹತ್ಯೆಗೈದಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಜಯಪಾಲ್ (19) ಮೃತ ಯುವಕನಾಗಿದ್ದಾನೆ.

ಘಟನೆ ನೆಡೆದಿದ್ದು ಹೇಗೆ? 

ಜಮೀನು ವಿಚಾರವಾಗಿ ನಡೆಯುತ್ತಿದ್ದ ಜಗಳದ ಕುರಿತು ವಿವಾದ ಇತ್ಯರ್ಥ ಮಾಡಲು ಜಯಪಾಲ್ ಹಾಗೂ ಆತನ ತಂದೆಯನ್ನು ಜಮೀನಿನ ಬಳಿ ಕರೆಸಿಕೊಂಡಿದ್ದನು. ಈ ವೇಳೆ ಮಾತಿಗೆ ಮಾತು ಎಳೆದಿದ್ದು ಇನ್ನೂ ಜಯಪಾಲ್‌ ತನ್ನ ಮೇಲೆ ಹಲ್ಲೆ ಮಾಡಬಹುದೆಂದು ಹಾಗೂ ಹೆಚ್ಚು ಕಡಿಮೆಯಾದರೆ ಕೊಲೆ ಮಾಡುವ ಉದ್ದೇಶದಿಂದಲೇ ಜೇಬಿನಲ್ಲಿ ಬಂದೂಕು ಇಟ್ಟುಕೊಂಡು ಬಂದಿದ್ದ ಆರೋಪಿ ಕುಮಾರ್‌ ಜಯಪಾಲ್‌ನ ಮೇಲೆ ಮೂರು ಗುಂಡುಗಳನ್ನು ಹಾರಿಸಿದ್ದಾನೆ.

ತಂದೆ ಕಣ್ಣೆದುರೇ ಪ್ರಾಣ ಬಿಟ್ಟ ಮಗ

ಅಣ್ಣನ ಮಗ ಜಯಪಾಲ್‌ನ ಎದೆ, ತೋಳು, ಮುಖದ ಭಾಗಕ್ಕೆ ಗುಂಡು ಹಾರಿಸಿದ್ದಾನೆ. ಗುಂಡಿನ ಹೊಡೆತಕ್ಕೆ ತೀವ್ರ ರಕ್ತಸ್ರಾವಗೊಂಡ ಜಯಪಾಲ್‌ ತಂದೆಯ ಮುಂದೆಯೇ ಸಾವನ್ನಪ್ಪಿದ್ದಾನೆ.

ಈ ಘಟನೆಯು ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ನ್ಯಾಯ ಕೊಡಿಸುವಂತೆ ತಂದೆ ಪೊಲೀಸರ ಮೊರೆ ಹೋಗಿದ್ದಾರೆ.

RELATED ARTICLES

Related Articles

TRENDING ARTICLES