Sunday, December 22, 2024

ಶೀಘ್ರವೇ ರಾಜ್ಯಸರ್ಕಾರ ಪತನ : ಕೆ.ಎಸ್.ಈಶ್ವರಪ್ಪ

ಮೈಸೂರು: ರಾಜ್ಯ ಸರ್ಕಾರ ಯಾವುದೇ ಕ್ಷಣದಲ್ಲಿ ಪತನ ಆಗಬಹುದು ಆದಷ್ಟು ಬೇಗ ಜಾತಿಗಣತಿ ವರದಿ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಕೆ.ಎಸ್​.ಈಶ್ವರಪ್ಪ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಜಾತಿವಿಚಾರವನ್ನಮುಂದಿಟ್ಟುಕೊಂಡು ದಲಿತ, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡುತ್ತಿದ್ದಾರೆ.

 ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಈಗಲೇ ಜಾತಿಗಣತಿ ವರದಿಯನ್ನು ಮುಂದಿಟ್ಟುಕೊಂಡು ಕಚ್ಚಾಡುತ್ತಿದ್ದಾರೆ.ಇನ್ನೂ ಈ ವರದಿಗೆ ಕಾರ್ಯದರ್ಶಿಯ ಸಹಿಯೇ ಆಗಿಲ್ಲ, ಹೀಗಾಗಿ ಅದು ಅವೈಜ್ಞಾನಿಕ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ. ಸಹಿಯೇ ಆಗದಿದ್ದರೆ ಅದನ್ನು ಕಸದ ಬುಟ್ಟಿಗೆ ಹಾಕಬೇಕಷ್ಟೇ

ಇದನ್ನ ಓದಿ: ಡಿ.ಕೆ ಶಿವಕುಮಾರ್ ನಾಳೆ ಸಿಎಂ ಆದ್ರೆ ಜೆಡಿಎಸ್ ನ 19 ಶಾಸಕರು ಬೆಂಬಲ ನೀಡುತ್ತೇವೆ :…

ಜಾತಿಗಣತಿಗೆ ವೀರಶೈವ ಲಿಂಗಾಯತ, ಒಕ್ಕಲಿಗ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಸದ್ಯಕ್ಕೆ ವರದಿ ಬಿಡುಗಡೆ ಆಗುವುದಿಲ್ಲ ಎಂದು ಆಗ್ರಹಿಸಿದ್ದಾರೆ.

 

 

RELATED ARTICLES

Related Articles

TRENDING ARTICLES