Monday, December 23, 2024

ಜಾತಿ ನಿಂದನೆ: ಪುನೀತ್​ ಕೆರೆಹಳ್ಳಿ ಪೊಲೀಸ್​ ವಶಕ್ಕೆ!

ಬೆಂಗಳೂರು: ರಾಷ್ಟ್ರ ರಕ್ಷಣಾ ಪಡೆಯ ಅಧ್ಯಕ್ಷ ಪುನೀತ್​ ಕೆರೆಹಳ್ಳಿಯನ್ನು ಜಾತಿನಿಂದನೆ ಪ್ರಕರಣದಡಿ ಸಂಪಿಗೆಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪುನೀತ್​ ಕೆರೆಹಳ್ಳಿ, ಹರೀಶ್​ ಭೈರಪ್ಪ ಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಎಫ್​.ಐ.ಆರ್​ ದಾಖಲಿಸಿಕೊಂಡಿರುವ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿ ಬಳಿಕ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಅತ್ತಿಗೆ, ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿದ ಮೈದುನ!

ಇತ್ತೀಚೆಗೆ ಗೂಂಡಾ ಕಾಯ್ದೆಯಡಿ ಬಂಧನದಲ್ಲಿದ್ದ ಪುನೀತ್​ ಕೆರೆಹಳ್ಳಿನ್ನು ವಿಚಾರಣೆ ನಡೆಸಿ ಬಂಧನ ಮುಕ್ತಗೊಳಿಸಲಾಗಿತ್ತು. ಇಷ್ಟೆ ಅಲ್ಲದೇ ಪುನೀತ್ ಕೆರೆಹಳ್ಳಿ ವಿರುದ್ದ ಈ ಹಿಂದೆ ಡಿಜೆ ಹಳ್ಳಿ, ಕಗ್ಗಲಿಪುರ, ಹಲಸೂರು ಗೇಟ್​, ಚಾಮರಾಜಪೇಟೆ, ಸಾತನೂರು ಹಾಗು ಎಲೆಕ್ಟ್ರಾನಿಕ್​ ಸಿಟಿ ಗಳಲ್ಲಿ ವಿವಿಧ ಪ್ರಕರಣ ದಾಖಲಾಗಿದ್ದವು.

RELATED ARTICLES

Related Articles

TRENDING ARTICLES