Monday, December 23, 2024

ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆ : 3 ದಿನಗಳಾದರೂ ನಡೆಯದ ಅಂತ್ಯಸಂಸ್ಕಾರ

ಬೆಂಗಳೂರು ಗ್ರಾಮಾಂತರ: ವನಕಲ್ಲು ಮಠದ ಹಾಸ್ಟೆಲ್​ನಲ್ಲಿದ್ದ 12 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ತುಮಕೂರಿನ ಕಾಳೇನಹಳ್ಳಿ ಗ್ರಾಮದ ಬಾಲಕ ಅಜಯ್ ಕುಮಾರ್(12)ಮೃತ ರ್ದುದೈವಿ ಎಂದು ಗುರುತಿಸಲಾಗಿದೆ. ವನಕಲ್ಲು ಮಠ ಶ್ರೀ ಬಸವರಮಾನಂದ ಸ್ವಾಮಿಗಳಿಗೆ ಸೇರಿದ ಮಠ ಇದಾಗಿದ್ದು, ಕಳೆದ 6ವರ್ಷಗಳಿಂದ ಸಮೀಪದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ.

ಮಠದ ಸಮೀಪದ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನೀವು ಈ ಸುದ್ದಿ ಓದಿದ್ದೀರಾ? : ಅತ್ತಿಗೆ, ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿದ ಮೈದುನ!

ಬಾಲಕ ಆತ್ಮಹತ್ಯೆಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ ಮರಣೋತ್ತರ ಪರೀಕ್ಷೆಗಾಗಿ ತುಮಕೂರಿನ ಜಿಲ್ಲಾಸ್ಪತ್ರೆಗೆ ಬಾಲಕನ ಮೃತದೇಹ ರವಾನೆ ಮಾಡಲಾಗಿದೆ.

3 ದಿನಗಳಾದ್ರೂ ನಡೆಯದ ಬಾಲಕನ ಅಂತ್ಯಸಂಸ್ಕಾರ

ಬಾಲಕನ ಮೃತ ದೇಹ ಮೂರು ದಿನವಾದರೂ ಆ್ಯಂಬುಲೆನ್ಸ್ ನಲ್ಲೇ ಇದೆ. ನಮ್ಮ ಮಗನ ಸಾವಿಗೆ ನಿಖರ ಕಾರಣ ತಿಳಿಯಬೇಕು ಇದು ಆತ್ಮಹತ್ಯೆಯಲ್ಲ ಕೊಲೆ ಮಠದ ಸ್ವಾಮೀಜಿ ವಿರುದ್ಧ ಪೋಷಕರ ಗಂಭೀರ ಆರೋಪ ಮಾಡಿದ್ದಾರೆ. ಸಾವಿಗೆ ನ್ಯಾಯ ಸಿಗೋವರೆಗೂ ಸಂಸ್ಕಾರ ಮಾಡಲ್ಲ ಅಂತಾ ಪಟ್ಟು ಹಿಡಿದಿದ್ದಾರೆ.

ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಅನುಮಾನಸ್ಪದ IPC 174C ಪ್ರಕರಣ ದಾಖಲಾಗಿದೆ.

 

RELATED ARTICLES

Related Articles

TRENDING ARTICLES