Friday, January 17, 2025

ಕೆ.ಎನ್.ರಾಜಣ್ಣ ವಿರುದ್ಧ ದೂರು ನೀಡಿದ ಕಾರ್ಯಕರ್ತರು

ಬೆಂಗಳೂರು: ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾಗೆ ಸಚಿವ ಕೆ.ಎನ್.ರಾಜಣ್ಣ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ದೂರು ನೀಡಿದ್ದಾರೆ.

ಕೆ.ಎನ್.ರಾಜಣ್ಣ ಹಿರಿಯ ನಾಯಕರು ಸಹಕಾರ ಖಾತೆ ಸಚಿವರಾಗಿದ್ದಾರೆ ಆದರೆ ಅವರ ಫರ್ಪಾರ್ಮೆನ್ಸ್ ಏನೂ ಇಲ್ಲ. ಸಹಕಾರ ಇಲಾಖೆಯಲ್ಲಿ ಯಾವುದೇ ಕೆಲಸ ಮಾಡಿಲ್ಲ ಕೇವಲ ಅನಗತ್ಯ ಹೇಳಿಕೆಗಳನ್ನ ನೀಡ್ತಾರೆ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಗೆ ಅವಕಾಶ ನೀಡಲು ಆರೋಪ ಮಾಡೋಕೆ ಅವಕಾಶ ಮಾಡಿಕೊಡ್ತಾರೆ
ನಾವು ನಿಮಗೆ ಮನವಿಯನ್ನ ಮಾಡುತ್ತೇವೆ ದಯವಿಟ್ಟು ರಾಜಣ್ಣ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದರು.

ಇದನ್ನೂ ಓದಿ: ಜಾತಿ ನಿಂದನೆ: ಪುನೀತ್​ ಕೆರೆಹಳ್ಳಿ ಪೊಲೀಸ್​ ವಶಕ್ಕೆ!

ನಮ್ಮ ಸರ್ಕಾರ ರಚನೆಯಾಗಿ ಐದು ತಿಂಗಳು ಕಳೆದಿದೆ ಉತ್ತಮ ಆಡಳಿತವನ್ನ ಸರ್ಕಾರ ನೀಡ್ತಿದೆ ಐದು ಗ್ಯಾರೆಂಟಿಗಳನ್ನ ಅನುಷ್ಠಾನ ಮಾಡ್ತಿದೆ ಸರ್ಕಾರ ಜನರ ವಿಶ್ವಾಸವನ್ನೂ ಗಳಿಸ್ತಿದೆ ಇಂತ ವೇಳೆ ಅನಗತ್ಯ ಹೇಳಿಕೆಗಳು ಸರಿಯಲ್ಲ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಬಗ್ಗೆ ಈ ರೀತಿಯ ಹೇಳಿಕೆ ನೀಡುವುದು ತರವಲ್ಲ
ಮೊದಲು ಸಚಿವ ರಾಜಣ್ಣ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು  ಸುರ್ಜೇವಾಲಾಗೆ ಪತ್ರ ಬರೆದಿದ್ದಾರೆ ಕಾರ್ಯಕರ್ತರು.

RELATED ARTICLES

Related Articles

TRENDING ARTICLES