Wednesday, January 22, 2025

17 ವರ್ಷದ ಬಾಲಕನ ಭೀಕರ ಕೊಲೆ

ಕೋಲಾರ: ಕೋಲಾರ ನಗರದಲ್ಲಿ 17 ಹರೆಯದ ಬಾಲಕನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ.

ಕಗ್ಗೊಲೆಯಾಗಿದೆ. ಈ ಹಿಂದೆ ಶ್ರೀನಿವಾಸಪುರದ ಕಾಂಗ್ರೆಸ್ ಮುಖಂಡ ಶ್ರೀನಿವಾಸ್‌ ಹತ್ಯೆ ಪ್ರಕರಣದ ಬೆನ್ನಲ್ಲೇ ಜಿಲ್ಲೆಯಲ್ಲಿ ಇದೀಗ ಮತ್ತೊಂದು ನೆತ್ತರು ಹರಿದಿದೆ.

ನಗರದ ಪೇಟೆಚಾಮನಹಳ್ಳಿ ಬಡಾವಣೆಯ ಸರ್ಕಾರಿ ಶಾಲೆಯ ಆವರಣದಲ್ಲೇ 17 ವರ್ಷದ ಬಾಲಕನ ಬರ್ಬರ ಹತ್ಯೆ (Murder Case) ಮಾಡಿರುವುದು ಕಂಡುಬಂದಿದೆ.

ನೀವು ಈ ಸುದ್ದಿ ಓದಿದ್ದೀರಾ? : ಅತ್ತಿಗೆ, ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿದ ಮೈದುನ!

ಕೊಲೆಯಾದ ಬಾಲಕ ಕಾರ್ತಿಕ್ ಸಿಂಗ್ (17) ಪ್ರಥಮ‌ ಪಿಯುಸಿ ಓದುತ್ತಿದ್ದ ಬಾಲಕನನ್ನು ಯುವಕರ ಗುಂಪು ಕೊಲೆ‌‌ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೃತ ಬಾಲಕನ ಮೈಮೇಲೆ ಲಾಂಗು ಮಚ್ಚುಗಳಿಂದ ಹಲ್ಲೆ ನಡೆಸಿರುವುದು ಕಂಡುಬಂದಿದೆ.

ಆರು ತಿಂಗಳ ಹಿಂದೆ ಕಾರ್ತಿಕ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಶೈನ್ ಮತ್ತು ಯುವಕರ ವಿಡಿಯೋ ಬಹಿರಂಗವಾಗಿದ್ದು, ಕೋಲಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES