ಬೆಂಗಳೂರು: ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗದ ವೈದ್ಯರ ವೇತನಕ್ಕೆ ಕತ್ತರಿ ಹಾಕಲು ಆರೋಗ್ಯ ಇಲಾಖೆ ಮುಂದಾಗಿದೆ.
ಸಾರ್ವಜನಿಕ ವಲಯದಿಂದ ದೂರುಗಳು ಬಂದ ಬೆನ್ನಲ್ಲೇ AEBAS (ಆಧಾರ್ ಬಯೋಮೆಟ್ರಿಕ್ ) ಹಾಜರಾತಿ ಕಡ್ಡಾಯಗೊಳಿಸಿದ್ದ ಆರೋಗ್ಯ ಇಲಾಖೆ ತನ್ನ ಅಧೀನದಲ್ಲಿರುವ ಎಲ್ಲಾ ಸಿಬ್ಬಂದಿಗಳಿಗೆ ನಿಯಮ ಪಾಲಿಸಲು ಸೂಚನೆ ನೀಡಿದೆ. AEBAS ಹಾಜರಾತಿ ಪರಿಶೀಲಿಸಿ ತದನಂತರ ವೇತನ ಬಿಡುಗಡೆ ಮಾಡಲು ನಿರ್ಧಾರಿಸಿದೆ. ಇಲ್ಲಿಯವರೆಗೆ AEBAS ಹಾಜರಾತಿ ಹಾಕದೇ ಇರುವ ಸಿಬ್ಬಂದಿಗಳಿಗೆ ಸೂಕ್ತ ಕಾರಣ ನೀಡಲು ಸೂಚನೆ ನೀಡಿದೆ.
ಇದನ್ನೂ ಓದಿ: ಜಿಕಾ ವೈರಸ್ ಪತ್ತೆ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ!
ಇನ್ನು ಕಾರಣ ಸೂಕ್ತವೆನಿಸಿದರೆ ಮಾತ್ರ ಸಿಬ್ಬಂದಿಗಳಿಗೆ ವೇತನ ಬಿಡುಗಡೆ ಮಾಡುವಂತೆ ತಿಳಿಸಿದೆ. ಸೂಕ್ತ ಕಾರಣ ತಿಳಿಸುವವರೆಗೂ ತಿಂಗಳ ವೇತನ ತಡೆಹಿಡಿಯುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದ್ದಾರೆ.