Wednesday, January 22, 2025

ಜನರಿಂದಲೇ ದೋಚುವ ಸರ್ಕಾರ ಎಂಬುದು ನಾಡಹಬ್ಬದಲ್ಲೂ ಸಾಬೀತಾಗಿದೆ : ಬಿಜೆಪಿ ಕಿಡಿ

ಬೆಂಗಳೂರು : ದಸರಾ ಕಲಾವಿದರಿಗೆ ನೀಡಿದ ಬಹುಮಾನದ ಚೆಕ್‌ಗಳು ಬೌನ್ಸ್‌ ಆಗಿದ್ದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.

ಈ ಕುರಿತು ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, ದಸರಾ ಕಲಾವಿದರಿಂದಲೇ ಕಮಿಷನ್‌ ಕೇಳಿ ರಾಜ್ಯದ ಜನತೆಯಿಂದ ಈಗಾಗಲೇ ಛೀಮಾರಿ ಹಾಕಿಸಿಕೊಂಡಿರುವ ಎಟಿಎಂ ಸರ್ಕಾರಕ್ಕೆ ಇನ್ನೂ ಬುದ್ಧಿ ಬಂದಿಲ್ಲ. ನಾಡಹಬ್ಬ ದಸರಾದಲ್ಲಿ ನೀಡಿದ ಬಹುಮಾನದ ಚೆಕ್‌ಗಳು ಬೌನ್ಸ್‌ ಆಗಲು ಆರಂಭಿಸಿವೆ ಎಂದರೆ ನಾಡಿಗೆ ಇದಕ್ಕಿಂತ ದೊಡ್ಡ ಅಪಮಾನ ಇನ್ನೇನಿದೆ ಎಂದು ಹರಿಹಾಯ್ದಿದೆ.

ಈ ಸುದ್ದಿ ಓದಿದ್ದೀರಾ? : ಫಂಡ್ಸ್ ಹುಟ್ಸೋಕೆ ಆಗಲ್ಲ, ದುಡ್ಡು ಎಲ್ಲಿಂದ ತರ್ತೀರಾ? : ಸಂಸದೆ ಸುಮಲತಾ

ಲಲಿತಕಲೆ ಹಾಗೂ ಕರಕುಶಲ ಉಪಸಮಿತಿ ಮುಖ್ಯಸ್ಥರ ಎಡವಟ್ಟಿನಿಂದ ದಸರಾ ಕಲಾವಿದರಿಗೆ ನೀಡಿದ ಬಹುಮಾನದ ಚೆಕ್‌ಗಳು ಬೌನ್ಸ್‌ ಆಗಿವೆ. ಇದರಿಂದ ದಸರಾ ಕಲಾವಿದರು ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ. ರಾಜ್ಯ ಕಾಂಗ್ರೆಸ್​ ಸರ್ಕಾರದ ದುರಾಡಳಿತದ ಪರಿಣಾಮ ಬಹುಮಾನ ಪಡೆದವರ ಖಾತೆಯಿಂದಲೇ ಹಣ ಖೋತಾ ಆಗಿದೆ. ಜನರಿಂದಲೇ ದೋಚುವ ಸರ್ಕಾರವಿದು ಎಂಬುದು ನಾಡಹಬ್ಬದಲ್ಲೂ ಸಾಬೀತಾಗಿದೆ ಎಂದು ಬಿಜೆಪಿ ಆಕ್ರೋಶ ಹೊರಹಾಕಿದೆ.

ಇದರಲ್ಲಿ ಸರ್ಕಾರದ ತಪ್ಪೇನಿದೆ?

ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೆಲವರು, ಅಧಿಕಾರಿಗಳ ಎಡವಟ್ಟು ಎಂದು ಬರೆದಿದ್ದಾರೆ. ಇದರಲ್ಲಿ ಸರ್ಕಾರದ ತಪ್ಪೇನಿದೆ? ಒಟ್ಟಿನಲ್ಲಿ ರಾಜ್ಯ ಕಾಂಗ್ರೆಸ್​ ಸರ್ಕಾರದ ಹೆಸರು ಹಾಳು ಮಾಡುವುದೇ ನಿಮ್ಮ (ಬಿಜೆಪಿ) ಮನೆಹಾಳು ಬುದ್ದಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES