Monday, December 23, 2024

ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಾಟ ನಿಷೇಧ : ಮಾರ್ಗಸೂಚಿ ಬಿಡುಗಡೆ!​

ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತ ಬಳಿಕ ಬೆಂಗಳೂರು ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದ್ದು, ದೀಪಾವಳಿ ಹಬ್ಬಕ್ಕೆ ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಇತ್ತೀಚೆಗಷ್ಟೇ ಪಟಾಕಿ ಗೋಡೌನ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ 14ಕ್ಕೂ ಅಧಿಕ ಜನ ಸಾವನ್ನಪ್ಪಿದ್ದರು. ಈ ಹಿನ್ನಲೆ ಇದೀಗ ಧಾರ್ಮಿಕ ಮೈದಾನಗಳು, ಶಾಲಾ ಕಾಲೇಜಿನ ಮೈದಾನಗಳು, ಕೇಂದ್ರ-ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಒಳಪಡುವ ಕಾರ್ಖಾನೆ, ರಕ್ಷಣಾ ಇಲಾಖೆ ಮೈದಾನಗಳು ಸೇರಿದಂತೆ ಖಾಸಗಿ ಮೈದಾನಗಳಲ್ಲೂ ಪಟಾಕಿ ಮಾರಾಟವನ್ನು ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗದ ಆಸ್ಪತ್ರೆ ಸಿಬ್ಬಂದಿಗಳ ವೇತನ ಕಡಿತಕ್ಕೆ ಸೂಚನೆ!

ಬಿಬಿಎಂಪಿ ಗುರುತು ಮಾಡಿದ ಸ್ಥಳಗಳಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಒಂದು ವಲಯದಲ್ಲಿ 2 ಅಥವಾ 3 ಮೈದಾನದಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಒಂದು ಮೈದಾನದಲ್ಲಿ 10 ಮಳಿಗೆಗಳನ್ನು ತೆರೆಯಬೇಕು. ಜೊತೆಗೆ ಪ್ರತಿ ಮಳಿಗೆಯ ನಡುವೆ ಮೂರರಿಂದ 4 ಅಡಿ ಅಂತರವಿದ್ದು, ಬೆಂಕಿ ನಂದಿಸುವ ಉಪಕರಣ ಕೂಡ ಕಡ್ಡಾಯವಾಗಿ ಇರಬೇಕು.

ಪಟಾಕಿ ಮಾರುವವರು ಮಳಿಗೆಯ ಪರವಾನಗಿ ಪ್ರದರ್ಶಿಸಬೇಕು. ಯಾರಾದರೂ ಅವಧಿ ಮುಗಿದ ಪಟಾಕಿ ಮಾರಾಟ ಮಾಡಿದರೆ ದಂಡ ವಿಧಿಸುವಂತೆ ಸೂಚಿಸಿದೆ.

RELATED ARTICLES

Related Articles

TRENDING ARTICLES