Monday, December 23, 2024

ದೀಪಾವಳಿ ಹಿನ್ನೆಲೆ ರೈಲುಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ!

ದೆಹಲಿ: ದೀಪಾವಳಿ ಹಬ್ಬ ಸನ್ನಿಹಿತವಾಗುತ್ತಿರುವ ಹಿನ್ನೆಲೆ ಯಾವುದೇ ಅಪಘಾತ ಸಂಭವಿಸದಂತೆ ನಿಗಾ ಇರಿಸಿರುವ ರೈಲ್ವೆ ಮಂಡಳಿ, ಎಲ್ಲಾ ವಲಯಗಳಿಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ.

ಮಂಡಳಿಯು ಅಗ್ನಿ ಸುರಕ್ಷತಾ ಅಭಿಯಾನವನ್ನು ಪ್ರಾರಂಭಿಸಲು ಎಲ್ಲಾ ವಲಯಗಳ ಜನರಲ್ ಮ್ಯಾನೇಜರ್‌ಗಳಿಗೆ ಆದೇಶಿಸಿದ್ದು, ಇದಕ್ಕಾಗಿ 3 ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಲಾಗಿದೆ. ಇದರ ಅಡಿಯಲ್ಲಿ ರೈಲ್ವೆಯ ಎಲ್ಲಾ ಸಂಬಂಧಪಟ್ಟ ಇಲಾಖೆಗಳು ಅಗ್ನಿ ಸುರಕ್ಷತೆಗಾಗಿ ಸಮಗ್ರ ಅಭಿಯಾನವನ್ನು ಪ್ರಾರಂಭಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: ಜಾನಪದ ನೃತ್ಯಕ್ಕೆ ಸಿಎಂ ಬಿಂದಾಸ್ ಸ್ಟೆಪ್ಸ್!

ಮಂಡಳಿಯ ಪ್ರಕಾರ, ನವೆಂಬರ್ 1 ರಿಂದ ನವೆಂಬರ್ 7 ರವರೆಗೆ ಇಲಾಖೆಗಳು ರೈಲ್ವೆಯ ಎಲ್ಲಾ ಬೋಗಿಗಳಲ್ಲಿ ಅಳವಡಿಸಲಾಗಿರುವ ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಅಥವಾ ಇಲ್ಲವೇ ಎಂಬುದನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಇದರೊಂದಿಗೆ ರೈಲ್ವೆ ಪಾರ್ಸೆಲ್ ವ್ಯಾನ್‌ನಲ್ಲಿ ಯಾವುದೇ ದಹನಕಾರಿ ವಸ್ತುಗಳನ್ನು ಸಾಗಿಸದಂತೆ ನೋಡಿಕೊಳ್ಳಲು ಸೂಚನೆಗಳನ್ನು ನೀಡಲಾಗಿದೆ.

ಯಾವುದೇ ಪಟಾಕಿ ಅಥವಾ ಯಾವುದೇ ದಹಿಸುವ ವಸ್ತುಗಳ ರೈಲ್ವೆ ಪಾರ್ಸೆಲ್ ಸಾಗಿಸದಂತೆ ಎಚ್ಚರವಹಿಸಬೇಕೆಂದು ಸೂಚಿಸಲಾಗಿದೆ.

RELATED ARTICLES

Related Articles

TRENDING ARTICLES