ಬೆಂಗಳೂರು: ಪರೀಕ್ಷಾ ಅಕ್ರಮ ತಡೆಯಲು KPSCಯಿಂದ ಡಿಜಿಟಲ್ ಸೆಕ್ಯೂರಿಟಿಯನ್ನ ಅಳವಡಿಸಿದೆ. ಈ ಹಿಂದೆ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿದ್ದ ಅಕ್ರಮಗಳ ಬಳಿಕ ಮತ್ತಷ್ಟು ಅಲರ್ಟ್ ಮಾಡಲಾಗಿದೆ.
ಸುಮಾರು 25 ಜಿಲ್ಲೆಗಳಲ್ಲಿ ಗ್ರೂಪ್ ಸಿ ಹುದ್ದೆಗಳಿಗೆ ನವೆಂಬರ್ 4 ಹಾಗೂ 5ರಂದು ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಅಕ್ರಮ ತಡೆಯಲು ಕೆಪಿಎಸ್‌ಸಿಯಿಂದ ಹಲವು ಕಠಿಣ ಕ್ರಮವನ್ನ ವಹಿಸಿಕೊಂಡಿದೆ. ಅಭ್ಯರ್ಥಿಗಳ ನೈಜತೆ ಪರೀಕ್ಷಿಸಲು ಬಯೋಮೆಟ್ರಿಕ್ ಫೇಸ್ ರೆಕಗ್ನಿಷನ್ ಹಾಗೂ ಜಾಮರ್ ಅಳವಡಿಕೆ ಮಾಡಲಾಗಿದೆ.
ಇದನ್ನೂ ಓದಿ: ಮೈಸೂರಿನ 44 ಸಾವಿರ ಮಹಿಳೆಯರಿಗಿಲ್ಲ ‘ಗೃಹಲಕ್ಷ್ಮಿ’!
ಇನ್ನು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಯಾವುದೇ ಆಧುನಿಕ ಉಪಕರಣ ತರುವಂತಿಲ್ಲ. ಮೊಬೈಲ್, ಬ್ಲೂಟೂತ್, ಕ್ಯಾಲ್ಕುಲೇಟರ್ ಸೇರಿದಂತೆ ಹಲವು ಉಪಕರಣಗಳು ನಿಷಿದ್ದ
ಪರೀಕ್ಷಾರ್ಥಿಗಳು ತುಂಬು ತೋಳಿನ ಶರ್ಟ್ ಹಾಗೂ ಯಾವುದೇ ಆಭರಣಗಳನ್ನ ಧರಿಸುವಂತಿಲ್ಲ ಹಾಗೂ
ಪರೀಕ್ಷಾ ಕೇಂದ್ರಗಳಲ್ಲಿ ಫೇಸ್ ಮಾಸ್ಕ್ ಧರಿಸುವಂತಿಲ್ಲ ಎಂದಿದೆ.
ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸುವ ಮುನ್ನ ಹ್ಯಾಮೆಡ್ ಹೆಲ್ಡ್ ಮೆಟಲ್ ಡಿಟೆಕ್ಟರ್ ಮುಖಾಂತರ ಭದ್ರತಾ ಸಿಬ್ಬಂದಿಯಿಂದ ಪರಿಶೀಲನೆ ನಡೆಸುವಂತೆ ತಿಳಿಸಿದೆ.