Wednesday, January 22, 2025

ರಾಜ್ಯದಲ್ಲಿ ಮುಂದುವರೆದ IT ದಾಳಿ: ಈ ಬಾರಿ ಬಿಲ್ಡರ್​ಗಳೆ ಟಾರ್ಗೆಟ್​!

ಬೆಂಗಳೂರು: ಕರ್ನಾಟಕದಲ್ಲಿ IT ಅಧಿಕಾರಿಗಳ ಬೇಟೆ ಮುಂದುವರೆದಿದೆ. ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ ಹಲವೆಡೆ ಬಿಲ್ಡರ್ಸ್​ ಮನೆಗಳ ಮೇಲೆ ಐಟಿ ದಾಳಿಯಾಗಿದೆ.

ಕಳೆದ ಹಲವು ದಿನಗಳಿಂದ ರಾಜ್ಯದ ಹಲವೆಡೆ ಜ್ಯುವೆಲರ್ ಅಂಗಡಿಗಳ ಮೇಲೆ ದಾಳಿ ಮಾಡಿದ್ದ ಐಟಿ ಅಧಿಕಾರಿಗಳು, ಈ ಬಾರಿ ಬಿಲ್ಡರ್ಸ್​ಗೆ ಶಾಕ್ ಕೊಟ್ಟಿದ್ದಾರೆ. ಕಳೆದ ಹಲವು ದಿನಗಳಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಐಟಿ ದಾಳಿಯಾಗುತ್ತಲೇ ಇದೆ. ಮೊನ್ನೇ ಅಷ್ಟೇ ಉಡುಪಿ ಹಾಗೂ ಮಂಗಳೂರು ಭಾಗದಲ್ಲಿ ಚಿನ್ನಾಭರಣ ಅಂಗಡಿಗಳ ಮೇಲೆ ಐಡಿ ಅಧಿಕಾರಿಗಳು ದಾಳಿ ಮಾಡಿದ್ದರು.

ಇದನ್ನೂ ಓದಿ: ಪರೀಕ್ಷೆಯಲ್ಲಿ ಅಕ್ರಮ ತಡೆಯಲು ಕೆಪಿಎಸ್​ಸಿ ಡಿಜಿಟಲ್‌ ಸೆಕ್ಯೂರಿಟಿ!

ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳಿಂದ ಜ್ಯುವೆಲ್ಲರಿ ಹಾಗೂ ಅಂಗಡಿ ಮಾಲೀಕರ ಮನೆಗಳ ಮೇಲೆ ದಾಳಿ ಮಾಡಿ ಕೋಟ್ಯಾಂತರ ರುಪಾಯಿ ವಶಕ್ಕೆ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.

RELATED ARTICLES

Related Articles

TRENDING ARTICLES