Monday, December 23, 2024

ಜಾನಪದ ನೃತ್ಯಕ್ಕೆ ಸಿಎಂ ಬಿಂದಾಸ್ ಸ್ಟೆಪ್ಸ್!

ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಕರ್ನಾಟಕ ಸಂಭ್ರಮ-50’ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರ ಮಕ್ಕಳ ಕುಣಿತಕ್ಕೆ ಹೆಜ್ಜೆ ಹಾಕಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಜಯನಗರ ಜಿಲ್ಲೆ ಹೊಸಪೇಟೆಯ ವಿಶ್ವವಿಖ್ಯಾತ ಹಂಪಿಯಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ಸಂಭ್ರಮ – 50 ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಜ್ಯೋತಿಯನ್ನು ಬೆಳಗಿ ನಗಾರಿ ಬಾರಿಸುವುದರ ಮೂಲಕ ಉದ್ಘಾಟಿಸಿದರು.

ಇದನ್ನೂ ಓದಿ: ಇಂದಿನಿಂದ ಹಾಸನಾಂಬೆ ದರ್ಶನ ಆರಂಭ: ಹರಿದು ಬಂದ ಭಕ್ತಸಾಗರ

ಇದೇ ವೇಳೆ‌ ವರ್ಷವೀಡಿ ರಾಜ್ಯಾದ್ಯಂತ ಸಂಚಾರಿಸುವ ಕನ್ನಡ ರಥಯಾತ್ರೆಗೂ ಚಾಲನೆ ನೀಡಿದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯನವರ ಹುಟ್ಟೂರು ಸಿದ್ದರಾಮನ ಹುಂಡಿಯ ವೀರ ಮಕ್ಕಳ ಕುಣಿತವನ್ನು ಆಯೋಜಿಸಲಾಗಿತ್ತು. ಈ ವೇಳೆ ನೃತ್ಯಗಾರರಿಗೆ ಸಾಥ್‌ ಕೊಟ್ಟ ಸಿದ್ದರಾಮಯ್ಯ ಸುಮಾರು 3 ನಿಮಿಷಗಳ ಕಾಲ ಕುಣಿದು ತಮ್ಮ ಹುಟ್ಟೂರಿನ ಹಿಂದಿನ ದಿನಗಳನ್ನು ನೆನೆದರು. ಸಿಎಂ ನೃತ್ಯಕ್ಕೆ ನೆರದಿದ್ದವರು ಸಂಭ್ರಮಿಸಿದರು.

RELATED ARTICLES

Related Articles

TRENDING ARTICLES