Sunday, December 22, 2024

ಮೈಸೂರಿನ 44 ಸಾವಿರ ಮಹಿಳೆಯರಿಗಿಲ್ಲ ‘ಗೃಹಲಕ್ಷ್ಮಿ’!

ಮೈಸೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಯಡಿ ಮೈಸೂರು ಜಿಲ್ಲೆಯ 6.5 ಲಕ್ಷ ಫಲಾನುಭವಿಗಳ ಪೈಕಿ 6.1 ಲಕ್ಷ ಮಂದಿ ಖಾತೆಗೆ 2 ಸಾವಿರ ರೂ. ಜಮೆ ಆಗಿದ್ದು, 44 ಸಾವಿರ ಮಹಿಳೆಯರಿಗೆ ಇನ್ನೂ ಹಣ ಪಾವತಿಯಾಗದೆ ನಿರಾಸೆ ಅನುಭವಿಸುತ್ತಿದ್ದಾರೆ.

ಹಣ ಪಾವತಿಯಾದವರು ಸಂಭ್ರಮದಲ್ಲಿ ತೇಲುತ್ತಿದ್ದಾರೆ. ಬಾರದಿರುವವರು ‘ನಮಗೇಕೆ ಇನ್ನೂ ಹಣ ಜಮೆ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ6,56,846 ಮಂದಿ ಗೃಹಲಕ್ಷ್ಮಿ ಯೋಜನೆಯಡಿ ತಮ್ಮ ಹೆಸರನ್ನು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ612495 ಮಹಿಳೆಯರ ಖಾತೆಗೆ ನೇರವಾಗಿ 122.50 ಕೋಟಿ ಹಣ ಜಮೆ ಆಗಿದೆ.

ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಾಟ ನಿಷೇಧ : ಮಾರ್ಗಸೂಚಿ ಬಿಡುಗಡೆ!​

ಆದರೆ, ಹಲವು ಕಾರಣಗಳಿಂದ 44,351 ಮಹಿಳೆಯರಿಗೆ ಇನ್ನೂ ಹಣ ಬಂದಿಲ್ಲ. ಈವರೆಗೂ ಜಿಲ್ಲೆಯ ಫಲಾನುಭವಿಗಳ ಖಾತೆಗೆ 2000 ರೂ.ಗಳಂತೆ ಒಟ್ಟು 124.36 ಕೋಟಿ ರೂ. ಸರಕಾರದಿಂದ ಬಿಡುಗಡೆಯಾಗಿದೆ.

RELATED ARTICLES

Related Articles

TRENDING ARTICLES