Monday, December 23, 2024

ಇತಿಹಾಸ ಸೃಷ್ಟಿಸಿದ ಕಿಂಗ್ ಕೊಹ್ಲಿ : ‘ವಿರಾಟ’ ರೂಪಕ್ಕೆ ಸಚಿನ್ ದಾಖಲೆ ಉಡೀಸ್

ಬೆಂಗಳೂರು : ರೆಕಾರ್ಡ್.. ರೆಕಾರ್ಡ್.. ರೆಕಾರ್ಡ್.. ಐ ಡೋಂಟ್ ಲೈಕ್ ಇಟ್. ಐ ಅವಾಯ್ಡ್! ಬಟ್, ರೆಕಾರ್ಡ್ ಲೈಕ್ಸ್ ಮೀ.. ಐ ಕಾಂಟ್ ಅವಾಯ್ಡ್.! ‘ವಿರಾಟ’ ರೂಪಕ್ಕೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಉಡೀಸ್ ಆಗಿದೆ.

ಕೆಜಿಎಫ್ ಚಿತ್ರದ ಈ ಡೈಲಾಗ್​ ರನ್ ಮೆಷಿನ್ ವಿರಾಟ್ ಕೊಹ್ಲಿಗೆ ತುಂಬಾನೇ ಹೇಳಿಮಾಡಿಸಿದಂತಿದೆ. ಏಕೆಂದರೆ ವಿರಾಟ್ ಕೊಹ್ಲಿ ಆಡುವ ಪ್ರತಿ ಪಂದ್ಯದಲ್ಲೂ ಹೊಸ ಇತಿಹಾಸ ಸೃಷ್ಟಿಸುತ್ತಿದ್ದಾರೆ. ವಿಶ್ವಕಪ್​-2023 ಟೂರ್ನಿಯಲ್ಲಿ ಬೊಂಬಾಟ್ ಪ್ರದರ್ಶನ ನೀಡುತ್ತಿರುವ ಕೊಹ್ಲಿ ಇದೀಗ ಮತ್ತೊಂದು ಹೊಸ ದಾಖಲೆ ನಿರ್ಮಿಸಿದ್ದಾರೆ.

ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಏಕದಿನ ಕ್ರಿಕೆಟ್ ಮಾದರಿಯಲ್ಲಿ ಏಷ್ಯಾದಲ್ಲೇ 8,000 ರನ್​ ವೇಗವಾಗಿ ಪೂರ್ಣಗೊಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.

ಕ್ಯಾಲೆಂಡರ್ ವರ್ಷದಲ್ಲಿ (ಏಕದಿನ ಕ್ರಿಕೆಟ್​) ಅತಿ ಹೆಚ್ಚು ಸಲ 1,000+ ರನ್​ ಗಳಿಸಿದ ದಾಖಲೆಯನ್ನು ಕಿಂಗ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಒಟ್ಟು 8 ಬಾರಿ (2011-14, 2017-19, 2023*) ಹಾಗೂ ಸಚಿನ್ ತೆಂಡೂಲ್ಕರ್ 7 ಬಾರಿ (1994, 1996-98, 2000, 2003, 2007) ಈ ಸಾಧನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES