Wednesday, January 22, 2025

ಮಾವನನ್ನು ಇರಿದು ಕೊಂದ ಅಳಿಯ!

ಹಾಸನ: ಸ್ವಂತ ಮಾವನನ್ನೇ ಅಳಿಯನೊಬ್ಬ ಚಾಕುವಿನಿಂದ ಇರಿದು ಕೊಂದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಹೋಬಳಿ ಗಂಜಿಗೆರೆ ಗ್ರಾಮದಲ್ಲಿ ನಡೆದಿದೆ.

ಮಾವ ಪ್ರಭುಸ್ವಾಮಿಯನ್ನು ಅಳಿಯ ಅಜಯ್ ಕೊಲೆ ಮಾಡಿದ್ದಾನೆ. ಕೊಲೆಯಾದ ಪ್ರಭುಸ್ವಾಮಿ ತಂಗಿ ಸಾವಿತ್ರಮ್ಮ ಏಳೆಂಟು ವರ್ಷಗಳ ಹಿಂದೆ ಗಂಡನನ್ನು ಬಿಟ್ಟು ತವರು ಮನೆಯಲ್ಲಿ ನೆಲೆಸಿದ್ದಳು. ಗಂಜಿಗೆರೆ ಗ್ರಾಮದಲ್ಲಿ ಅಕ್ಕಪಕ್ಕದ ಮನೆಯಲ್ಲಿ ಅಣ್ಣ-ತಂಗಿ ವಾಸವಾಗಿದ್ದರು. ಹೀಗಾಗಿ ಆಸ್ತಿ ವಿಚಾರವಾಗಿ ಪ್ರಭುಸ್ವಾಮಿಯು ತನ್ನ ತಂಗಿ ಸಾವಿತ್ರಮ್ಮ ಜೊತೆ ಆಗಾಗ ಜಗಳವಾಡುತ್ತಿದ್ದನು.

ಇದನ್ನು ಓದಿ: ಚೈತ್ರಾ ವಿರುದ್ಧದ ವಂಚನೆ ಪ್ರಕರಣ: ಸಿಸಿಬಿ ತನಿಖೆ ಪೂರ್ಣ!

ಕಂಠಪೂರ್ತಿ ಮದ್ಯಸೇವಿಸಿ ಬಂದ ಪ್ರಭುಸ್ವಾಮಿ, ಒಡಹುಟ್ಟಿದ ತಂಗಿ ಹಾಗೂ ಆಕೆಯ ಮಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಇದರಿಂದ ಸಾವಿತ್ರಮ್ಮ ಬೇಸತ್ತು ಹೋಗಿದ್ದಳು. ತನ್ನ ಮಗನಿಗೆ ಮಾವ ಜಗಳವಾಡುವ ವಿಷಯ ತಿಳಿಸಿದ್ದಳು.

ಇಂದು ಕೂಡ ತಂಗಿಯೊಂದಿಗೆ ಜಗಳವಾಡಿ ಕೆಟ್ಟ ಪದಗಳಿಂದ ಪ್ರಭುಸ್ವಾಮಿ ನಿಂದಿಸಿದ್ದನು. ವಿಷಯ ತಿಳಿದು ಗಂಜಿಗೆರೆ ಗ್ರಾಮಕ್ಕೆ ಆಗಮಿಸಿದ ಅಜಯ್, ಮನೆಯಲ್ಲಿದ್ದ ಮಾವ ಪ್ರಭುಸ್ವಾಮಿಯನ್ನು ಚಾಕುವಿನಿಂದ ಇರಿದು ಕೊಂದೇ ಬಿಟ್ಟಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES