ಬೆಂಗಳೂರು : 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಇನ್ನೂ ಬದಲಾಯಿಸಿಕೊಳ್ಳದೇ ಇರುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಗುಡ್ನ್ಯೂಸ್ ನೀಡಿದೆ.
ಬ್ಯಾಂಕ್‌ನಲ್ಲಿ ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ಮತ್ತೆ ಅವಕಾಶ ಕಲ್ಪಿಸಿದೆ. ಈ ಮೊದಲು ಕೇಂದ್ರೀಯ ಬ್ಯಾಂಕ್, ಈ ನೋಟುಗಳನ್ನು ಹಿಂಪಡೆಯುವ ದಿನಾಂಕವನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಿತ್ತು. ಈ ದಿನಾಂಕದವರೆಗೆ ಸಾರ್ವಜನಿಕರು ನೋಟುಗಳನ್ನು ಠೇವಣಿ ಮಾಡಬಹುದು ಅಥವಾ ಬದಲಾಯಿಸಬಹುದು ಎಂದಿತ್ತು. ಆದರೆ ಇದೀಗ, ಈ ಗಡುವಿನ ನಂತರವೂ 2 ಸಾವಿರ ರೂಪಾಯಿ ನೋಟುಗಳು ಕಾನೂನುಬದ್ಧವಾಗಿ ಮಾನ್ಯವಾಗಿರುತ್ತವೆ ಎಂದು ಸ್ಪಷ್ಟಪಡಿಸಿದೆ.
ಮೇ 19, 2023 ರಂದು RBI ತನ್ನ ಈ ಹೊಸ ಪಿಂಕ್ ನೋಟುಗಳನ್ನು ಹಿಂದೆತೆಗೆದುಕೊಳ್ಳುವುದಾಗಿ ಘೋಷಿಸಿತು. ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ ಭಾರತೀಯ ರಿಸರ್ವರ್ ಬ್ಯಾಂಕ್ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಲಾಗಿದೆ. ಹೀಗಾಗಿ, ಈ ನೋಟುಗಳು (ಪಿಂಕ್ ನೋಟು) ಚಲಾವಣೆಯಲ್ಲಿ ಇರುವುದಿಲ್ಲ. ಆದ್ದರಿಂದ, ಸಾರ್ವಜನಿಕರು ಬ್ಯಾಂಕ್‌ಗಳಿಗೆ ತೆರಳಿ ನೋಟು ಬದಲಾವಣೆ ಮಾಡಿಕೊಳ್ಳಬೇಕು ಎಂದು ಸೂಚಿಸಿತ್ತು.
2,000 ನೋಟುಗಳ ಠೇವಣಿ ಮತ್ತು ವಿನಿಮಯದ ದಿನಾಂಕವನ್ನು ಆರ್‌ಬಿಐ ಕನಿಷ್ಠ ಒಂದು ತಿಂಗಳ ಕಾಲ ವಿಸ್ತರಿಸಬಹುದು. ಇದು ಅನಿವಾಸಿ ಭಾರತೀಯರು ಮತ್ತು ವಿದೇಶದಲ್ಲಿ ವಾಸಿಸುವ ಇತರರನ್ನು ಪರಿಗಣಿಸುತ್ತದೆ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದರು. ಅದರಂತೆ 2,000 ರೂ. ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ RBI ಮತ್ತೆ ಅವಕಾಶ ಕಲ್ಪಿಸಿದೆ.