ಹೊಸಪೇಟೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಅಧಿಕಾರ ಹಂಚಿಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಈ ಹೇಳಿಕೆ ಡಿ.ಕೆ ಶಿವಕುಮಾರ್ ಬಣ ಹಾಗೂ ರಾಜ್ಯ ರಾಜಕೀಯದಲ್ಲಿ ಹಲ್ ಚಲ್ ಎಬ್ಬಿಸಿದೆ.
ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಬೆಂಬಲಿಸಿ 136 ಸ್ಥಾನ ಕೊಟ್ಟಿದ್ದಾರೆ. ಮತ್ತೆ ಚುನಾವಣೆಗೆ ಹೋಗ್ತೀವಿ, ಗೆಲ್ತೀವಿ. ಸರ್ಕಾರಕ್ಕೆ 5 ವರ್ಷ ಜನ ಆಶೀರ್ವದಿಸಿದ್ದಾರೆ. 5 ವರ್ಷ ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ ಎಂದು ಹೇಳುವ ಮೂಲಕ ಅಧಿಕಾರ ಹಂಚಿಕೆ ಥಿಯರಿಗಳನ್ನ ಉಡೀಸ್ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ 6 ತಿಂಗಳಲ್ಲಿ ಪತನವಾಗಲಿದ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಪಾಪ ಯತ್ನಾಳ್ ಕನಸು ಕಾಣುತ್ತಿದ್ದಾರೆ. ಯತ್ನಾಳ್ ಹಗಲು ವೇಳೆಯಲೇ ಕನಸು ಕಾಣುತ್ತಿದ್ದಾರೆ. ಪ್ರಧಾನಿಗಳು ಬರ ಕುರಿತು ಚರ್ಚೆಗೆ ಅವಕಾಶವನ್ನೆ ಕೊಡುತ್ತಿಲ್ಲ. ರಾಜ್ಯದ ಬಿಜೆಪಿಯ ಸಂಸದರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಮಲತಾಯಿ ಧೋರಣೆ ತಾಳುತ್ತಿದೆ
ಬಿಜೆಪಿಯವರು ಬರ ಅಧ್ಯಯನ ಮಾಡಲು ಹೊರಟಿದ್ದಾರೆ. ಮೊದಲು ಕೇಂದ್ರ ಬಳಿ ಹೋಗಿ ಅನುದಾನ ಕೊಡಲು ಹೇಳಲಿ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಶಾಸಕ, ಸಚಿವರನ್ನೇ ಭೇಟಿ ಆಗಲ್ಲ. ಇನ್ನು ನಮ್ಮನ್ನು ಏನು ಭೇಟಿಗೆ ಅವಕಾಶ ಕೊಡುತ್ತಾರೆ? ರಾಜ್ಯದ ಬಗ್ಗೆ ಅವರು ಮಲತಾಯಿ ಧೋರಣೆ ತಾಳುತ್ತಿದೆ. ಒಂದು ತಿಂಗಳ ಹಿಂದೆಯೇ ಹಣ ಕೇಳಿದ್ದೇವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.