ಬೆಂಗಳೂರು : ಬ್ಯಾಟಿಂಗ್ನಲ್ಲಿ ಗಿಲ್, ವಿರಾಟ್, ಅಯ್ಯರ್ ಅಬ್ಬರ.. ಮೊಹಮ್ಮದ್ ಶಮಿ, ಸಿರಾಜ್ ಹಾಗೂ ಬುಮ್ರಾ ತೂಫಾನ್ ಬೌಲಿಂಗ್ಗೆ ಲಂಕಾ ದಹನ.
ವಿಶ್ವಕಪ್-2023 ಟೂರ್ನಿಯ 33ನೇ ಪಂದ್ಯದಲ್ಲಿ ಶ್ರೀಲಂಕಾವನ್ನು ಹೀನಾಯವಾಗಿ ಸೋಲಿಸಿರುವ ಭಾರತ ಪ್ರಚಂಡ ಗೆಲುವು ಸಾಧಿಸಿತು. ಭಾರತ ನೀಡಿದ 358 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಭಾರತದ ಬೌಲರ್ಗಳ ಬೆಂಕಿ ದಾಳಿಗೆ ಕಂಗಾಲಾಯಿತು.
19.4 ಓವರ್ಗಳಲ್ಲಿ ಕೇವಲ 55 ರನ್ಗಳಿಗೆ ಶ್ರೀಲಂಕಾ ಸರ್ವಪತನ ಕಂಡಿತು. ಭಾರತದ ಪರ ಮೊಹಮ್ಮದ್ ಶಮಿ 5 ವಿಕೆಟ್ ಕಬಳಿಸಿ ಮಿಂಚಿದರು. ಮೊಹಮ್ಮದ್ ಸಿರಾಜ್ 3, ಜಸ್ಪ್ರೀತ್ ಬುರ್ಮಾ ಹಾಗೂ ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು. ಇದರೊಂದಿಗೆ ಭಾರತ 302 ರನ್ಗಳಿಂದ ಜಯ ಸಾಧಿಸಿತು. 5 ಓವರ್ಗಳಲ್ಲಿ 18 ರನ್ ನೀಡಿ 5 ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
7 ಪಂದ್ಯಗಳಲ್ಲಿ ಸತತ 7 ಗೆಲುವು
ಇದು ವಿಶ್ವಕಪ್ ಇತಿಹಾಸದಲ್ಲಿಯೇ ಎರಡನೇ ಅತಿ ದೊಡ್ಡ ಗೆಲುವಾಗಿದೆ. ಈ ಜಯದೊಂದಿಗೆ ಭಾರತ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತು. ಆಡಿದ 7 ಪಂದ್ಯಗಳಲ್ಲಿ ಸತತ 7 ಗೆಲುವು ಸಾಧಿಸಿ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ತಂಡವ್ನು ಹಿಂದಿಕ್ಕೆ ಅಗ್ರಸ್ಥಾನಕ್ಕೇರಿತು.