Friday, November 22, 2024

ದಕ್ಷಿಣ ಆಫ್ರಿಕಾಗೆ 190 ರನ್​ಗಳ ಭರ್ಜರಿ ಜಯ : ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಹರಿಣಗಳು

ಬೆಂಗಳೂರು : ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 190 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. ಆ ಮೂಲಕ ಭಾರತವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಪುಣೆಯಲ್ಲಿ ನಡೆದ ವಿಶ್ವಕಪ್-2023 ಟೂರ್ನಿಯ 32ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 357 ರನ್​ ಕಲೆಹಾಕಿತು. 358 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಕಿವೀಸ್ ಹರಿಣಗಳ ಮಾರಕ ಬೌಲಿಂಗ್​ ದಾಳಿಗೆ ನಲುಗಿತು.

35.3 ಓವರ್​ಗಳಲ್ಲಿ ಕೇವಲ 167 ರನ್​ಗಳಿಸುವ ಮೂಲಕ ಸರ್ವಪತನ ಕಂಡಿತು. ನ್ಯೂಜಿಲೆಂಡ್ ಪರ ಫಿಲಿಪ್ಸ್ ಅರ್ಧಶತಕ (60) ಸಿಡಿಸಿದ್ದು ಬಿಟ್ಟರೆ ಯಾವೊಬ್ಬ ಬ್ಯಾಟರ್ ಸಹ ಉತ್ತಮ ಪ್ರದರ್ಶನ ನೀಡಲಿಲ್ಲ. ಆರಂಭಿಕರಾದ ಕಾನ್ವೆ 2, ಯಂಗ್ 33, ರಚಿನ್ ರವೀಂದ್ರ 9, ಮಿಚೆಲ್ 24 ಹಾಗೂ ನಾಯಕ ಲ್ಯಾಥಮ್ 4 ರನ್​ ಗಳಿಸಿದರು. ಹೀಗಾಗಿ, ಕಿವೀಸ್ ಹೀನಾಯ ಸೋಲು ಅನುಭವಿಸಿತು. ದಕ್ಷಿಣ ಆಫ್ರಿಕಾ ಪರ ಮಹಾರಾಜ್ 4, ಜಾನ್ಸೆನ್ 3, ಕೊಯೆಟ್ಟಿ 2 ಹಾಗೂ ರಬಾಡ ಒಂದು ವಿಕೆಟ್ ಪಡೆದರು.

ಡಿ ಕಾಕ್, ಡಸ್ಸೆನ್ ಬೊಂಬಾಟ್ ಆಟ

ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ ಹಾಗೂ ಡಸ್ಸೆನ್ ಬೊಂಬಾಟ್ ಆಟ ಪ್ರದರ್ಶಿಸಿ ಇಬ್ಬರೂ ಶತಕ ಸಿಡಿಸಿ ಮಿಂಚಿದರು. ಡಿ ಕಾಕ್ 3 ಭರ್ಜರಿ ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ 114, ಡಸ್ಸೆನ್ 5 ಬೊಂಬಾಟ್ ಸಿಕ್ಸರ್ ಹಾಗೂ 9 ಬೌಂಡರಿಗಳ ನೆರವಿನೊಂದಿಗೆ 133, ಡೇವಿಡ್ ಮಿಲ್ಲರ್ 4 ಸಿಕ್ಸರ್ ಹಾಗೂ 2 ಬೌಂಡರಿ ನೆರನೊಂದಿಗೆ 53 ಸಿಡಿಸಿದರು.

RELATED ARTICLES

Related Articles

TRENDING ARTICLES